ಮುಂಬೈ: ಇತ್ತೀಚೆಗೆ ಮೊಬೈಲ್ ಎಲ್ಲರ ಬದುಕಿನ ಅವಿಭಾಜ ಅಂಗವಾಗಿದೆ. ಇದರಿಂದ ಸಾಕಷ್ಟು ಅನಾಹುತಗಳು ಸಂಭವಿಸುತ್ತಿವೆ. ಮಕ್ಕಳಂತೂ ಮೊಬೈಲ್ ಬಿಟ್ಟು ಸರಿಯಲ್ಲ ಎನ್ನುವಂತಹ ಸ್ಥಿತಿ ನಿರ್ಮಾಣವಾಗಿದೆ. ಇಲ್ಲೊಂದು ಘಟನೆಯಲ್ಲಿ ಮೊಬೈಲ್ ವಿಷಯವಾಗಿ ತಂದೆ ಬೈದಿದ್ದಕ್ಕೆ ಯುವತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.
ಮೊಬೈಲ್‌ನಲ್ಲಿ ಹೊಸ ಆಪ್ ಡೌನ್ ಲೋಡ್ ಮಾಡಿದ್ದಕ್ಕೆ ಮಗಳಿಗೆ ತಂದೆ ಬೈದಿದ್ದಾರೆ. ಇದರಿಂದ ಮನನೊಂದು ಅಪ್ರಾಪ್ತ ಮಗಳು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಡೊಂಬಿವಾಲಿಯಲ್ಲಿ ಈ ಘಟನೆ ನಡೆದಿದೆ. 16 ವರ್ಷದ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಅಪ್ರಾಪ್ತೆಯು ಮೊಬೈಲ್ ನಲ್ಲಿ ಸ್ನ್ಯಾಪ್ ಚಾಟ್ ಆಪ್ ಡೌನ್‌ಲೋಡ್ ಮಾಡಿಕೊಂಡಿದ್ದಳು. ಮೊಬೈಲ್‌ನಲ್ಲಿ ಸ್ನ್ಯಾಪ್‌ಚಾಟ್ ಆಪ್ ನೋಡಿ ತಂದೆ ಕೋಪಗೊಂಡು ಬೈದಿದ್ದಾರೆ. ಅಲ್ಲದೇ, ಆ ಆಪ್ ಡಿಲೀಟ್ ಮಾಡುವಂತೆ ಹೇಳಿದ್ದಾರೆ. ಇದರಿಂದ ಬೇಸರಗೊಂಡು ಮಗಳು ಕೋಣೆಗೆ ಹೋಗಿದ್ದಾಳೆ.
ಆದರೆ, ಬೆಳಿಗ್ಗೆ ಆಕೆ ಹೊರಗೆ ಬಾರದ್ದಕ್ಕೆ ಕುಟುಂಬಸ್ಥರು ಒಳ ಹೋಗಿ ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಆನಂತರ ತಂದೆ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿ, ದೂರು ದಾಖಲಿಸಿದ್ದಾರೆ.