ಭಾರತೀಯ ಕ್ರಿಕೆಟ್ ತಂಡದ ಹಿರಿಯ ಹಾಗೂ ಅನುಭವಿ ಆಟಗಾರರು ಟಿ20 ವಿಶ್ವಕಪ್ ನಲ್ಲಿ (T20 World Cup 2024) ಭಾಗವಹಿಸಿದ್ದರೆ, ಇನ್ನೊಂದೆಡೆ ಭಾರತದ ಯುವ ಪಡೆ ಜಿಂಬಾಬ್ವೆ ಪ್ರವಾಸ (India tour of Zimbabwe) ಕೈಗೊಳ್ಳಲು ಸನ್ನದ್ಧವಾಗಿದೆ. ಆದರೆ, ಕನ್ನಡಿಗನಿಗೆ ಮಾತ್ರ ಈ ಬಾರಿಯೂ ಅವಕಾಶ ಕೈ ತಪ್ಪಿದೆ.
ಜಿಂಬಾಬ್ವೆ ಪ್ರವಾಸಕ್ಕೆ ಇಂದು ಬಿಸಿಸಿಐ (BCCI), 15 ಜನ ಸದಸ್ಯರ ತಂಡ ಪ್ರಕಟಿಸಿದೆ. ನಾಯಕತ್ವವನ್ನು ಶುಭಮನ್ ಗಿಲ್ ಗೆ ನೀಡಲಾಗಿದೆ. ಇನ್ನುಳಿದಂತೆ ಹೆಚ್ಚಿನ ಯುವ ಆಟಗಾರರಿಗೆ ಅವಕಾಶ ನೀಡಲಾಗಿದೆ. ಟಿ20 ವಿಶ್ವಕಪ್ ನಲ್ಲಿ ಪ್ಲೇಯಿಂಗ್ ಇಲೆವೆನ್ ನಲ್ಲಿ ಕಾಣಿಸಿಕೊಂಡಿರುವ ಒಬ್ಬನೇ ಒಬ್ಬ ಆಟಗಾರನಿಗೂ ಅವಕಾಶ ನೀಡಿಲ್ಲ.

ಜುಲೈ 6ರಿಂದ ಸರಣಿ ಆರಂಭವಾಗಲಿದೆ. ಈ ಸರಣಿಯಲ್ಲಿ ಐದು ಟಿ20 ಪಂದ್ಯಗಳು ನಡೆಯಲ್ಲಿವೆ. ಅಭಿಷೇಕ್ ಶರ್ಮಾ, ರಿಯಾನ್ ಪರಾಗ್, ನಿತೀಶ್ ರೆಡ್ಡಿ, ತುಷಾರ್ ದೇಶಪಾಂಡೆ ಮತ್ತು ಧ್ರುವ ಜುರೆಲ್ ಹೊಸ ಮುಖಗಳು. ರುತುರಾಜ್ ಗಾಯಕ್ವಾಡ್, ರವಿ ಬಿಷ್ಣೋಯ್, ವೇಗಿ ಖಲೀಲ್ ಅಹ್ಮದ್ ಮತ್ತು ಅವೇಶ್ ಖಾನ್ ತಂಡಕ್ಕೆ ಮರಳಿದ್ದಾರೆ.

ಕೆಎಲ್ ರಾಹುಲ್ ಗೆ ಮತ್ತೊಮ್ಮೆ ಅವಕಾಶ ಸಿಕ್ಕಿಲ್ಲ. ಟಿ20 ವಿಶ್ವಕಪ್ ನಿಂದಲೂ ಅವರನ್ನು ಕೈ ಬಿಡಲಾಗಿತ್ತು. ಈಗ ಜಿಂಬಾಬ್ವೆ ಸರಣಿಗೂ ಅವರನ್ನು ಆಯ್ಕೆಗೆ ಪರಿಗಣಿಸಲಾಗಿಲ್ಲ.
ಪಂದ್ಯಗಳು, ಜುಲೈ 6 – 1ನೇ ಟಿ20, ಹರಾರೆ
7 ಜುಲೈ – 2 ನೇ ಟಿ20, ಹರಾರೆ
ಜುಲೈ 10 – 3ನೇ ಟಿ20, ಹರಾರೆ
ಜುಲೈ 13 – 4ನೇ ಟಿ20, ಹರಾರೆ
ಜುಲೈ 14 – 5 ನೇ ಟಿ20, ಹರಾರೆ
ಜಿಂಬಾಬ್ವೆ ಪ್ರವಾಸದಲ್ಲಿ ಟೀಂ ಇಂಡಿಯಾ: ಶುಭ್ಮನ್ ಗಿಲ್ (ನಾಯಕ), ಯಶಸ್ವಿ ಜೈಸ್ವಾಲ್, ರುತುರಾಜ್ ಗಾಯಕ್ವಾಡ್, ಅಭಿಷೇಕ್ ಶರ್ಮಾ, ರಿಂಕು ಸಿಂಗ್, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಧ್ರುವ್ ಜುರೆಲ್ (ವಿಕೆಟ್ ಕೀಪರ್), ನಿತೀಶ್ ರೆಡ್ಡಿ, ರಿಯಾನ್ ಪರಾಗ್, ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯ್, ಅವೇಶ್ ಖಾನ್, ಖಲೀಲ್ ಅಹ್ಮದ್, ಮುಖೇಶ್ ಕುಮಾರ್, ತುಷಾರ್ ದೇಶಪಾಂಡೆ.
