ರಸ್ತೆಯಲ್ಲಿ ಹಸುಗಳ ಕಾಟಾದದಿಂದಾಗಿ ಬೈಕ್ ಸವಾರ ಸಾವನ್ನಪ್ಪಿದ ಘಟನೆ ನಡೆದಿದೆ.
ತಮಿಳುನಾಡಿನ ತಿರುನೆಲ್ವೇಲಿಯಲ್ಲಿ ಈ ಘಟನೆ ನಡೆದಿದೆ. ರಸ್ತೆಯ ಎರಡೂ ಬದಿಯಲ್ಲಿ ವಾಹನಗಳು ಸಂಚರಿಸುತ್ತಿದ್ದಾಗ ಬೈಕ್ ಹಾಗೂ ಬಸ್ ಎದುರು -ಬದುರು ಬರುತ್ತಿದ್ದವು. ಈ ಸಂದರ್ಭದಲ್ಲಿ ಎರಡು ಹಸುಗಳು ಕಾದಾಟಕ್ಕಿಳಿದಿವೆ. ಏಕಾಏಕಿ ಒಂದು ಹಸು ಮತ್ತೊಂದು ಹಸುವನ್ನು ತಿವಿದಿದ್ದು, ಆ ಹಸು ಬೈಕ್ ಸವಾರನ ಮೇಲೆ ಬಿದ್ದ ಪರಿಣಾಮ ಬೈಕ್ ಸವಾರ ಆಯತಪ್ಪಿ ಬಸ್ ನ ಚಕ್ರದಡಿ ಬಿದ್ದು ಸಾವನ್ನಪ್ಪಿರುವ ಘಟನೆ ನಡೆದಿದೆ.

ತಮಿಳುನಾಡಿನ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಉದ್ಯೋಗಿಯಾಗಿರುವ ವೇಲಾಯುಧರಾಜ್ ಸಾವನ್ನಪ್ಪಿರುವ ವ್ಯಕ್ತಿ. ಘಟನೆಯ ದೃಶ್ಯಾವಳಿ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಒಂದು ಹಸು ಅವರ ಎದುರೇ ಹೋಗುತ್ತಿರುತ್ತದೆ, ಬಲ ಭಾಗದಿಂದ ಮತ್ತೊಂದು ಹಸು ಬಂದು ಆ ಹಸುವಿಗೆ ಡಿಕ್ಕಿ ಹೊಡೆದಿದೆ. ಆಗ ಹಸು ಬೈಕ್ ಸವಾರನ ಮೇಲೆ ಬಿದ್ದಿದೆ. ಬೈಕ್ ಸವಾರ ಆಯತಪ್ಪಿ ಬಸ್ ಕೆಳಗೆ ಬಿದ್ದಿದ್ದಾನೆ. ಬಸ್ ಹರಿದಿದೆ. ಕೂಡಲೇ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
