ವಿಶ್ವ ಅರೋಗ್ಯ ಸಂಸ್ಥೆ ಇತ್ತೀಚಿಗೆ ಸೋಡಿಯಂ ಸೇವನೆಯ ಕುರಿತು ಎಚ್ಚರಿಕೆಯ ಸಂದೇಶವನ್ನ ರವಾನಿಸಿದೆ. ‘ವಿಶ್ವದಲ್ಲಿ ಕೆಟ್ಟ ಆಹಾರ ಪದ್ಧತಿ ಹಾಗೂ ಅತಿಯಾದ ಆಹಾರ ಸೇವನೆಯಿಂದ, ವರ್ಷಕ್ಕೆ 80ಲಕ್ಷ ಜನ ಪ್ರಾಣವನ್ನು ಕಳೆದುಕೊಳ್ಳುತ್ತಿದ್ದಾರೆ, ಅದರಲ್ಲಿ 20ಲಕ್ಷ ಜನರು ಅತಿಯಾದ ಸೋಡಿಯಂ ಸೇವನೆಯಿಂದ ಮರಣ ಹೊಂದಿರುವರೆಂದು’ ವರದಿಯಲ್ಲಿ ತಿಳಿಸಿದೆ.
‘NaCl’ ಅಂದ್ರೆ ಸಾಮಾನ್ಯ ಉಪ್ಪು, ಇದು 40% ಸೋಡಿಯಂ ಹಾಗೂ 60% ಕ್ಲೋರೈಡ್ ಸಂಯೋಜಕವಾಗಿದೆ.
ಸೋಡಿಯಂ ಮನುಷ್ಯನ ಜೀವಕೋಶದ ಹೊರಗೆ ನೀರು ಮತ್ತು ಖನಿಜ ಸಮತೋಲನಕ್ಕೆ, ನರಗಳ ಪ್ರಚೋದನೆಗೆ ಇನ್ನು ಹಲವಾರು ರೀತಿಯಲ್ಲಿ ಸಹಕರಿಸುತ್ತದೆ. ಆದರೆ ಅತಿಯಾದ ಸೇವನೆ ಅಧಿಕ ರಕ್ತದೋತ್ತಡ, ಮೂತ್ರ ಪಿಂಡದ ಸಮಸ್ಯೆ, ಹೃದಯ ಸಂಬಂದಿ ರೋಗಗಳು ಹಾಗೆ ಸ್ಟ್ರೋಕ್ ನಂತಹ ಕಾಯಿಲೆಗಳಿಗೆ ಈ ರುಚಿಕರ ಉಪ್ಪು ಕಾರಣವಾಗುತ್ತದೆ. ಹಾಗಾಗಿ ಜನ ಈ ಬಗ್ಗೆ ಎಚ್ಚೆತ್ತುಕೊಂಡು, ದಿನಕ್ಕೆ 5ಗ್ರಾಂಕ್ಕಿಂತ ಕಡಿಮೆ ಉಪ್ಪು ಸೇವನೆ ಮಾಡುತ್ತಾ ಬಂದರೇ, ಮುಂದಿನ ವರುಷದಲ್ಲಿ ಲಕ್ಷಗಳ ಲೆಕ್ಕದಲ್ಲಿ ಪ್ರಾಣ ಉಳಿಯುವುದು ಎಂದು ವಿಶ್ವ ಅರೋಗ್ಯ ಸಂಸ್ಥೆ ವರದಿ ನೀಡಿದೆ.