ಪ್ರಸಕ್ತ ಸಾಲಿನ ಐಪಿಎಲ್ ನಲ್ಲಿ ಈಗಾಗಲೇ 39 ಪಂದ್ಯಗಳು ಮುಗಿದಿವೆ. ಈಗಾಗಲೇ ಕೆಲವು ತಂಡಗಳಿಗೆ ಪ್ಲೇ ಆಫ್ ಹಾದಿ ಸುಗಮವಾಗಿದ್ದು, ಇನ್ನೂ ಕೆಲವು ತಂಡಗಳಿಗೆ ಹಾದಿ ತುಂಬಾ ಕಠಿಣವಾಗಿದೆ. ಆದರೂ ಕುತೂಹಲ ಹೆಚ್ಚಾಗುತ್ತಿದೆ.
ಈಗಾಗಲೇ ಬಹುತೇಕ ತಂಡಗಳು 8 ಪಂದ್ಯಗಳನ್ನು ಆಡಿವೆ. 10 ಪಂದ್ಯಗಳ ಪೈಕಿ ಪ್ಲೇ ಆಫ್ ನಲ್ಲಿ ಸ್ಥಾನ ಪಡೆಯಲು 6 ತಂಡಗಳ ಮಧ್ಯೆ ಭಾರೀ ಪೈಪೋಟಿ ನಡೆದಿದೆ. ರಾಜಸ್ಥಾನ್ ರಾಯಲ್ಸ್, ಕೋಲ್ಕತ್ತಾ ನೈಟ್ ರೈಡರ್ಸ್, ಸನ್ ರೈಸರ್ಸ್ ಹೈದರಾಬಾದ್, ಲಕ್ನೋ ಸೂಪರ್ ಜೈಂಟ್ಸ್, ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಗುಜರಾತ್ ಟೈಟಾನ್ಸ್ ಮಧ್ಯೆ ಫೈಟ್ ನಡೆದಿವೆ.
ಮುಂಬೈ ಇಂಡಿಯನ್ಸ್, ಡೆಲ್ಲಿ ಕ್ಯಾಪಿಟಲ್ಸ್, ಪಂಜಾಬ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳಿ ಪ್ಲೇ ಆಫ್ ಹಾದಿ ತುಂಬಾ ಕಷ್ಟವಾಗಿದೆ. ಈ ನಾಲ್ಕು ತಂಡಗಳು ಪ್ಲೇ ಆಫ್ ಗೆ ಏರಲು ದೊಡ್ಡ ಚಮತ್ಕಾರ ನಡೆಯಬೇಕಿದೆ. ಪ್ಲೇ ಆಫ್ ಗೆ ಏರಲು ಕನಿಷ್ಠ 16 ಅಂಕಗಳ ಅಗತ್ಯವಿದೆ. ರಾಜಸ್ಥಾನ್ ರಾಯಲ್ಸ್ ಆಡಿರುವ 8 ಪಂದ್ಯಗಳಲ್ಲಿ 7 ರಲ್ಲಿ ಗೆದ್ದು 14 ಅಂಕಗಳೊಂದಿಗೆ ಅಂಕ ಗಳಿಸಿದೆ. ಇನ್ನೊಂದೆ ಒಂದು ಗೆಲುವು ರಾಜಸ್ಥಾನಕ್ಕೆ ಪ್ಲೇ ಆಫ್ ಹಾದಿ ತೋರಿಸುತ್ತದೆ.
ಕೋಲ್ಕತ್ತಾ ಎರಡನೇ ಸ್ಥಾನದಲ್ಲಿದ್ದರೆ, ಹೈದರಾಬಾದ್ ಮೂರನೇ ಸ್ಥಾನದಲ್ಲಿದೆ ಮತ್ತು ಲಕ್ನೋ ನಾಲ್ಕನೇ ಸ್ಥಾನದಲ್ಲಿದೆ. ಈ ತಂಡಗಳು ತಲಾ 5 ಪಂದ್ಯಗಳನ್ನು ಗೆದಿದ್ದು, ತಲಾ 10 ಅಂಕ ಹೊಂದಿವೆ. ಚೆನ್ನೈ ಮತ್ತು ಗುಜರಾತ್ ತಲಾ 8 ಅಂಕಗಳೊಂದಿಗೆ 5 ಮತ್ತು 6ನೇ ಸ್ಥಾನದಲ್ಲಿವೆ. ರಾಜಸ್ತಾನ್ ರಾಯಲ್ಸ್ ಹೊರತುಪಡಿಸಿ, ಕೆಕೆಆರ್, ಸನ್ರೈಸರ್ಸ್ ಹೈದರಾಬಾದ್, ಲಕ್ನೋ ಸಿಎಸ್ಕೆ ತಂಡಗಳು ಕೊನೆಯ 4 ರ ಘಟ್ಟಕ್ಕೆ ತಲುಪಲು ಪ್ರಬಲ ಸ್ಪರ್ಧಿಗಳೆಂದು ಪರಿಗಣಿಸಲಾಗಿದೆ.