ಪ್ರಸಕ್ತ ಸಾಲಿನ ಐಪಿಎಲ್ ನಲ್ಲಿ ರಾಜಸ್ತಾನ್ ರಾಯಲ್ಸ್ ಪರ ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಹಾಲ್ ಉತ್ತಮ ಬೌಲಿಂಗ್ ಮಾಡಿ ಪರ್ಪಲ್ ಕ್ಯಾಪ್ ತೊಟ್ಟಿದ್ದಾರೆ. ಅಲ್ಲದೇ, ಬರೋಬ್ಬರಿ 13 ವರ್ಷಗಳ ನಂತರ ಶೇನ್ ವಾರ್ನ್ ದಾಖಲೆ ಮುರಿದಿದ್ದಾರೆ.
ಈಗಾಗಲೇ ಚಹಾಲ್ ಆಡಿರುವ 5 ಪಂದ್ಯಗಳಲ್ಲಿ 10 ವಿಕೆಟ್ ಪಡೆದಿದ್ದಾರೆ. ಗುಜರಾತ್ ವಿರುದ್ಧ ನಡೆದ 5ನೇ ಪಂದ್ಯದಲ್ಲಿ 4 ಓವರ್ ಗಳಲ್ಲಿ 43 ರನ್ ನೀಡಿ 2 ವಿಕೆಟ್ ಪಡೆದಿರುವ ಚಹಾಲ್ ರಾಜಸ್ಥಾನ ರಾಯಲ್ಸ್ ಪರ ಐಪಿಎಲ್ ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದವರ ಪಟ್ಟಿಯಲ್ಲಿ ಮೂರನೇ ಸ್ಥಾನ ತಲುಪಿದ್ದಾರೆ.
2022 ರಿಂದ ಇಲ್ಲಿಯವರೆಗೆ ಚಹಾಲ್ ಆಡಿರುವ 36 ಪಂದ್ಯಗಳಲ್ಲಿ 58 ವಿಕೆಟ್ ಪಡೆದಿದ್ದಾರೆ. ಈ ಮೂಲಕ ತಂಡದ ಮಾಜಿ ನಾಯಕ ಶೇನ್ ವಾರ್ನ್ ದಾಖಲೆ ಮುರಿದಿದ್ದಾರೆ. ಶೇನ್ ವಾರ್ನ್ 55 ಪಂದ್ಯಗಳಲ್ಲಿ 57 ವಿಕೆಟ್ ಪಡೆದಿದ್ದರು. ಈ ವಿಕೆಟ್ ಗಳಿಂದ ವಾರ್ನ್ ತಂಡದ ಪರ ಅಧಿಕ ವಿಕೆಟ್ ಪಡೆದ ಬೌಲರ್ಗಳ ಪೈಕಿ ಮೂರನೇ ಸ್ಥಾನದಲ್ಲಿದ್ದರು. ಈಗ ಆ ಸ್ಥಾನವನ್ನು ಚಹಾಲ್ ಪಡೆದಿದ್ದಾರೆ.
ರಾಜಸ್ಥಾನ್ ರಾಯಲ್ಸ್ ಪರ ಸಿದ್ದಾರ್ಥ್ ತ್ರಿವೇದಿ ಅತಿ ಹೆಚ್ಚು ವಿಕೆಟ್ ಪಡೆದಿದ್ದು, 76 ಪಂದ್ಯಗಳಲ್ಲಿ 65 ವಿಕೆಟ್ ಪಡೆದಿದ್ದಾರೆ. ಶೇನ್ ವ್ಯಾಟ್ಸನ್ 78 ಪಂದ್ಯಗಳಲ್ಲಿ 61 ವಿಕೆಟ್ ಪಡೆದಿದ್ದಾರೆ. ಚಹಾಲ್ ಐಪಿಎಲ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. 150 ಪಂದ್ಯಗಳನ್ನಾಡಿರುವ ಚಾಹಲ್ 21.25 ಸರಾಸರಿಯಲ್ಲಿ 197 ವಿಕೆಟ್‌ಗಳನ್ನು ಪಡೆದಿದ್ದಾರೆ. ಕೇವಲ 3 ವಿಕೆಟ್ ಪಡೆದರೆ, 200 ವಿಕೆಟ್ ಸಾಧನೆಯನ್ನು ಚಹಾಲ್ ಮಾಡಲಿದ್ದಾರೆ.