ನವ ದೆಹಲಿ: ವ್ಯಕ್ತಿಯೊಬ್ಬ ಲಿವ್ ಇನ್ ಪಾರ್ಟರ್ ನ್ನು ಕೊಲೆ ಮಾಡಿ ಆಕೆಯ ದೇಹನ್ನು ಕಬೋರ್ಡ್ ನಲ್ಲಿ ಇಟ್ಟು ಪರಾರಿಯಾಗಿರುವ ಘಟನೆಯೊಂದು ನಡೆದಿದೆ.
ದೆಹಲಿಯಲ್ಲಿ ಈ ಘಟನೆ ನಡೆದಿದೆ. 26 ವರ್ಷದ ಮಹಿಳೆಯೊಂದಿಗೆ ಆತ ಲಿವಿಂಗ್ ಟುಗೆದರ್ ಇದ್ದ. ತಂದೆಯು ಮೃತ ಮಗಳನ್ನು ಸಂಪರ್ಕ ಮಾಡಲು ಹಲು ದಿನಗಳಿಂದ ಪ್ರಯತ್ನಿಸಿದ್ದಾರೆ. ಆದರೆ, ಸಂಪರ್ಕಕ್ಕೆ ಸಿಗದ ಹಿನ್ನೆಲೆಯಲ್ಲಿ ಗಾಬರಿಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ದೂರು ನೀಡುತ್ತಿದ್ದಂತೆ ಕೊಲೆಯಾಗಿರುವ ವಿಷಯ ಬೆಳಕಿಗೆ ಬಂದಿದೆ.
ಮಗಳು ಕರೆ ಸ್ವೀಕರಿಸದ ಹಿನ್ನೆಲೆಯಲ್ಲಿ ಗಾಬರಿಗೊಂಡ ತಂದೆ ಕೊಲೆಯಾಗಿರಬಹುದು ಎಂದು ಸಂಶಯಗೊಂಡು ದೂರು ನೀಡಿದ್ದರು. ತಂದೆಯ ಅನುಮಾನದಂತೆ ದಾಬ್ರಿ ಪೊಲೀಸರು ದ್ವಾರಕಾದ ರಾಜಪುರಿ ಪ್ರದೇಶದಲ್ಲಿ ಲಿನ್- ಇನ್- ಪಾರ್ಟ್ನರ್ ಜೊತೆ ವಾಸವಾಗಿದ್ದ ಮನೆಗೆ ದಾಳಿ ಮಾಡಿತ್ತು. ಈ ಸಂದರ್ಭದಲ್ಲಿ ಮಹಿಳೆಯ ಶವ ಅಲ್ಮೇರಾದಲ್ಲಿ ತುಂಬಿದ್ದನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಲಿವ್-ಇನ್- ಪಾರ್ಟ್ನರ್ ಕೊಲೆ ಮಾಡಿದ್ದಾನೆಂದು ತಂದೆ ಆರೋಪಿಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.