ಕಾರವಾರ: ರಾಜ್ಯದಲ್ಲಿ ಬಿಸಿಲಿನ ಕಾವು ಜೋರಾಗುತ್ತಿದ್ದು, ಜನರು ಕಂಗಾಲಾಗುವಂತಾಗಿದೆ. ಅಲ್ಲದೇ, ಬಿಸಿಲಿನಿಂದಾಗಿ ಹಲವಾರು ಅನಾಹುತಗಳು ಕೂಡ ನಡೆಯುತ್ತಿವೆ.
ಬಿಸಿಲಿನ ಬೇಗೆಗೆ ಸಿಲುಕಿದ್ದ ಕಾರು ಹೊತ್ತಿ ಉರಿದು ಮೂವರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಈ ಘಟನೆ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ಪಟ್ಟಣದಲ್ಲಿ ನಡೆದಿದೆ. ದಾಂಡೇಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಇದೇ ರೀತಿಯಲ್ಲಿ ಮತ್ತೊಂದು ಪ್ರಕರಣ ನಡೆದಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ರಾಯಿ ಕಂಗಿತ್ತಿಲು ಹತ್ತಿರ ಡಸ್ಟರ್ ಕಾರು ಹೊತ್ತಿ ಉರಿದಿದೆ. ಪರಿಣಾಮ ಕಾರಿನಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕೂಡಲೇ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ತೆರಳಿ ಬೆಂಕಿ ನಂದಿಸಿದ್ದಾರೆ.