ಗದಗ: ದಲ್ಲಾಳಿ ವ್ಯಾಪಾರಿಯೊಬ್ಬಾತ ಬರೋಬ್ಬರಿ 9 ಕೋಟಿ ರೂ. ಮೌಲ್ಯದ ಕಡಲೆ ಖರೀದಿಸಿ ಪರಾರಿಯಾಗಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಬರಗಾಲ ಇದ್ದ ಹಿನ್ನೆಲೆಯಲ್ಲಿ ರೈತರು ಅಲ್ಪಸ್ವಲ್ಪ ಬಿತ್ತನೆ ಮಾಡಿದ್ದರು. ಆದರೆ, ಪರಾರಿಯಾಗಿರುವ ವ್ಯಕ್ತಿ ಮಾರುಕಟ್ಟೆ ದರಕ್ಕಿಂತ ಸ್ವಲ್ಪ ಹೆಚ್ಚಿನ ಬೆಲೆಗೆ ಖರೀದಿ ಮಾಡಿದ್ದಾನೆ. ಹೀಗಾಗಿ ರೈತರು ಆತನಿಗೆ ಕೊಟ್ಟಿದ್ದಾರೆ.
ಹೀಗಾಗಿ ರೈತರು ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ನಡೆಸುತ್ತಿದ್ದಾರೆ. ಜಿಲ್ಲೆಯ ಕುರ್ತಕೋಟಿ, ಅಂತೂರು ಬೆಂತೂರು, ಬಿಂಕದಕಟ್ಟಿ, ಶ್ಯಾಗೋಟಿ, ಚಿಕ್ಕಹಂದಿಗೋಳ ಸೇರಿದಂತೆ 10 ಕ್ಕೂ ಹೆಚ್ಚು ಗ್ರಾಮದ ರೈತರು ಮೋಸ ಹೋಗಿದ್ದಾರೆ. ದಾವಣಗೆರೆ ಮೂಲದ ಮಾರುತಿಗೌಡ ಎನ್ನುವಾತ ರೈತರಿಗೆ ಕೋಟ್ಯಾಂತರ ರೂಪಾಯಿ ಪಂಗನಾಮ ಹಾಕಿದ್ದಾನೆ ಎನ್ನಲಾಗಿದೆ.
ವಂಚಕನನ್ನು ಮಾರುತಿಗೌಡ ಎನ್ನಲಾಗಿದೆ. ಈತ ಗ್ರಾಮಗಳಲ್ಲಿನ ಸ್ವಸಹಾಯ ಸಂಘದ ಮಹಿಳೆಯರಿಗೆ ನನಗೆ ಕಡಲೆ ಮಾರಾಟ ಮಾಡಿದರೆ ಮಹಿಳಾ ಸಂಘಗಳಾದ ಸಂಜೀವಿನಿ ಒಕ್ಕೂಟಕ್ಕೆ ಕಮಿಷನ್ ನೀಡೋದಾಗಿ ಹೇಳಿದ್ದಾನೆ. ಹೀಗಾಗಿ ಮಹಿಳೆಯರು ರೈತರಿಂದ ಕಡಲೆ ವ್ಯಾಪಾರ ಮಾಡಿಸಿದ್ದಾರೆ. ಹೀಗೆ ಬರೋಬ್ಬರಿ 9 ಕೋಟಿ ರೂ. ಮೋಸ ಮಾಡಿದ್ದಾನೆ.