ಬಾಲಿವುಡ್ ನಟಿ ದಿ. ಶ್ರೀದೇವಿ ಪತಿ, ನಿರ್ಮಾಪಕ ಬೋನಿ ಕಪೂರ್ ವಿರುದ್ಧ ಕೋಟ್ಯಂತರ ರೂ. ವಂಚನೆ ಆರೋಪ ಕೇಳಿ ಬಂದಿದೆ.
ಸಿನಿಮಾದ ಚಿತ್ರೀಕರಣಕ್ಕೆ ಬೇಕಾದ ಪ್ರಾಪರ್ಟಿ ಸರಬರಾಜು ಮಾಡುತ್ತಿದ್ದ ಉದ್ದಮೆದಾರರೊಬ್ಬರಿಂದ ಈ ಆರೋಪ ಕೇಳಿ ಬಂದಿದೆ. ಬೋನಿ ಕಪೂರ್ ನಮಗೆ ತಮಗೆ ಕೋಟ್ಯಂತರ ರೂಪಾಯಿ ಶುಲ್ಕ ನೀಡದೆ ಬಾಕಿ ಉಳಿಸಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.
ಆದರೆ, ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಕಪೂರ್, ತಮ್ಮ ಮೇಲಿನ ಆರೋಪಗಳಿಗೆ ಸ್ಪಷ್ಟನೆ ನೀಡಿದ್ದಾರೆ. ನಿರ್ಮಾಣ ಸಂಸ್ಥೆಯಿಂದ 1.70 ಕೋಟಿ ರೂ. ಬಿಲ್ ನೀಡಬೇಕಿತ್ತು. ನಾವು ಸಿನಿಮಾ ಬಿಡುಗಡೆ ಆಗುವ ಮುನ್ನವೇ 1.07 ಕೋಟಿ ನೀಡಿದ್ದೇವು. 63 ಲಕ್ಷ ರೂ. ಬಾಕಿ ಉಳಿಸಿದ್ದೆ. ಆ ವ್ಯಕ್ತಿ ನನ್ನನ್ನು ಭೇಟಿಯಾದಾಗ ಸಿನಿಮಾ ಬಿಡುಗಡೆ ಆಗಲಿ ಹಣ ತಲುಪುತ್ತದೆ ಎಂದಿದ್ದೆ. ಆತ ಸಹ ಖುಷಿಯಾಗಿ ಹೋಗಿದ್ದ. ಸಿನಿಮಾ ಬಿಡುಗಡೆ ಆದ ಬಳಿಕವೇ ಹಲವರ ಬಿಲ್ ಕ್ಲಿಯರ್ ಆಗುವುದು ಚಿತ್ರರಂಗದಲ್ಲಿ ನಡೆದುಕೊಂಡ ಬಂದಿರುವ ವಿಷಯ. ನಾನು ಮೋಸಗಾರ ಆಗಿದ್ದಿದ್ದರೆ 50 ವರ್ಷಗಳ ಕಾಲ ಈ ಚಿತ್ರರಂಗದಲ್ಲಿ ಉಳಿಯುತ್ತಿದ್ದೆನೆ. ಮೋಸ ಮಾಡಿಕೊಂಡು 50 ವರ್ಷ ಯಾವ ನಿರ್ಮಾಪಕ ತಾನೇ ಉಳಿದಾನು ಎಂದು ಹೇಳಿದ್ದರು.
ಈಗಾಗಲೇ 1.07 ಕೋಟಿ ರೂಪಾಯಿ ಕೊಟ್ಟವನಿಗೆ 63 ಲಕ್ಷ ರೂಪಾಯಿ ದೊಡ್ಡದೇನಲ್ಲ. ನನ್ನ ವಿರುದ್ಧ ಆರೋಪ ಮಾಡಿದರೆ ನಾನು ಸುಮ್ಮನಿರುತ್ತೇನೆ, ನಾನೇನು ಕ್ರಮ ಕೈಗೊಳ್ಳುವುದಿಲ್ಲ ಎಂಬ ಕಾರಣಕ್ಕೆ ಕೆಲವರು ನನ್ನ ವಿರುದ್ಧ ಆರೋಪಗಳನ್ನು ಮಾಡುತ್ತಾರೆ. ಅದೆಲ್ಲ ಸಾಮಾನ್ಯ ಎಂದು ಹೇಳಿದ್ದಾರೆ. ಹಿಂದೆ ನನ್ನೊಂದಿಗೆ ಕೆಲಸ ಮಾಡಿರುವ ಯಾರನ್ನಾದರೂ ಕೇಳಿಕೊಳ್ಳಿ, ನಾನು ತಡವಾಗಿ ಪೇಮೆಂಟ್ ಮಾಡುತ್ತೇನೆ, ಪೇಮೆಂಟ್ ನೀಡುವುದಿಲ್ಲ ಎಂದು ಯಾರಾದರೂ ಹೇಳಿದ್ದಾರೆ ಎಂದು ಪ್ರಶ್ನಿಸಿದ್ದರು.
ಬೋನಿ ಕಪೂರ್ 1980 ರಿಂದಲೂ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಹಿಂದಿ ಅಲ್ಲದೇ, ತಮಿಳು, ತೆಲುಗಿನಲ್ಲಿಯೂ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ. ಶ್ರೀದೇವಿಯ ಪತಿಯೂ ಆಗಿರುವ ಬೋನಿ ಕಪೂರ್, ಯುವ ನಟಿಯರಾದ ಜಾನ್ಹವಿ ಕಪೂರ್, ಖುಷಿ ಕಪೂರ್, ಅರ್ಜುನ್ ಕಪೂರ್ ತಂದೆ. ನಟ ಅನಿಲ್ ಕಪೂರ್ ಇವರ ಸಹೋದರ. ಇವ ನಿರ್ಮಾಣದ ಮೈದಾನ್ ಬಿಡುಗಡೆಗೆ ಸಿದ್ಧವಾಗಿದೆ.