ನಟಿ ತ್ರಿಷಾ 2010ರಲ್ಲಿ ಖಟ್ಟಾ ಮಿಟ್ಟಾ ಸಿನಿಮಾದ ಮೂಲಕ ಬಾಲಿವುಡ್ ಅಂಗಳ ಪ್ರವೇಶಿಸಿದ್ದರು. ಈ ಸಿನಿಮಾದ ಮೂಲಕ ಅವರು ಇನ್ನು ಮುಂದೆ ಬಾಲಿವುಡ್ ಅಂಗಳದಲ್ಲಿ ಮಿಂಚಬಹುದು ಎಂದೇ ಎಲ್ಲರೂ ಭಾವಿಸಿದ್ದರು. ಆದರೆ, ಆ ಚಿತ್ರದ ಅಭಿನಯ ಕೆಟ್ಟ ಅನುಭವ ಎಂದು ತ್ರಿಷಾ ಹೇಳಿಕೊಂಡಿದ್ದಾರೆ.
ಅಕ್ಷಯ್ ಕುಮಾರ್ ನಟನೆಯ ಈ ಸಿನಿಮಾ ತ್ರಿಷಾಗೆ ಬಾಲಿವುಡ್ ನಲ್ಲಿ ದೊಡ್ಡ ಬ್ರೇಕ್ ನೀಡಬಹುದು ಎನ್ನಲಾಗಿತ್ತು. ಆದರೆ, ಹಾಗಾಗಲಿಲ್ಲ. ಸದ್ಯ ಅವರೇ ಈ ಮಾತನ್ನು ಒಪ್ಪಿಕೊಂಡು ಮಾತನಾಡಿದ್ದಾರೆ. 2010ರ ನಂತರ ನೀವು ಯಾವುದೇ ಬಾಲಿವುಡ್ ಸಿನಿಮಾ ಒಪ್ಪಿಕೊಳ್ಳಲಿಲ್ಲ ಯಾಕೆ? ಎಂಬ ಪ್ರಶ್ನೆಗೆ ಉತ್ತರಿಸಿರುವ ಅವರು, ಖಟ್ಟಾ ಮಿಟ್ಟಾ ಸಿನಿಮಾ ನನಗೆ ದೊಡ್ಡ ಹೆಸರು ತಂದು ಕೊಡುತ್ತದೆ ಎಂದು ನಂಬಿದ್ದೆ. ಆದರೆ, ಅದು ಸುಳ್ಳಾಯಿತು. ಬಾಲಿವುಡ್ ಪ್ರೇಕ್ಷಕರು ನನ್ನ ಒಪ್ಪಲಿಲ್ಲ. ಹೀಗಾಗಿ ಮತ್ತೆ ನಾನು ಬಾಲಿವುಡ್ ಗೆ ಹೋಗುವುದಿಲ್ಲ ಎಂದು ಹೇಳಿದ್ದಾರೆ.
ದಕ್ಷಿಣದಲ್ಲಿ ಹಿಟ್ ಸಿನಿಮಾಗಳನ್ನು ಕೊಟ್ಟರೂ, ಹೆಸರಾಂತ ನಟರೊಂದಿಗೆ ತೆರೆ ಹಂಚಿಕೊಂಡಿದ್ದರೂ ಆ ಚಿತ್ರ ಪ್ಲಾಫ್ ಆಯಿತು. ಹೀಗಾಗಿ ನಂತರ ಅವರು ಮಾತ್ರ ಬಾಲಿವುಡ್ ಕಡೆ ಮುಖ ಕೂಡ ಹಾಕಿಲ್ಲವಂತೆ. ತ್ರಿಷಾ ಕನ್ನಡ ಸೇರಿದಂತೆ ಹಲವಾರು ಭಾಷಾ ಚಿತ್ರಗಳನ್ನು ಒಪ್ಪಿಕೊಂಡಿದ್ದಾರೆ. ಆದರೆ, ಇದುವರೆಗೂ ಬಾಲಿವುಡ್ ಅಂಗಳಕ್ಕೆ ಮತ್ತೆ ಹೋಗಿಲ್ಲ.