ಹಲವು ಶಾಲೆಗಳಿಗೆ ಮಕ್ಕಳಿಗೆ ಹೆಚ್ಚಿನ ಹೋಮ್ ವರ್ಕ್ ನೀಡಲಾಗಿರುತ್ತದೆ. ಅದೇ ರೀತಿ ಇಲ್ಲೊಂದು ಶಾಲೆಯಲ್ಲಿ ಕೂಡ ಹೋಮ್ ವರ್ಕ್ ಹೆಚ್ಚಾಗಿ ನೀಡಲಾಗಿತ್ತು. ಇದನ್ನು ಕಂಡ ಶಿಕ್ಷಕರಿಗೆ ಕರೆ ಮಾಡಿ ಕಿರಿಕಿರಿ ಮಾಡಿದ್ದಾನೆ. ಹೀಗಾಗಿ ಆತನ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ಆತನ ಕರೆಯಿಂದ ಬೇಸತ್ತ ಶಾಲಾ ಆಡಳಿತ ಮಂಡಳಿ ಆ ವ್ಯಕ್ತಿಯ ವಿರುದ್ಧ ಠಾಣೆಯನ್ನು ದೂರನ್ನು ನೀಡಿದ್ದು, ಆ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಫೆಬ್ರವರಿ 29 ರಂದು ಅಮೇರಿಕಾದ ಓಹಿಯೋದಲ್ಲಿ ಈ ಘಟನೆ ನಡೆದಿದೆ. ಆಡಂ ಸೈಜ್ಮೋರ್ ಬಂಧಿತ ವ್ಯಕ್ತಿ. ಆಡಂ ಅವರ ಮಗ ಕ್ರೇಮರ್ ಎಲಿಮೆಂಟರಿ ಶಾಲೆಯಲ್ಲಿ ಓದುತ್ತಿದ್ದು, ಶಾಲೆಯಲ್ಲಿ ಮಗನಿಗೆ ಸಿಕ್ಕಾಪಟ್ಟೆ ಹೋಮ್ ವರ್ಕ್ ನೀಡುತ್ತಿದ್ದರು. ಇದರಿಂದ ಸಿಟ್ಟಾದ ತಂದೆ ಶಿಕ್ಷಕರಿಗೆ ಪದೇ ಪದೇ ಕರೆ ಮಾಡಿ ಕಿರಿಕಿರಿ ಮಾಡಿದ್ದಾರೆ. ಶಾಲೆಯ ಪ್ರಾಂಶುಪಾಲರಿಗೂ ಕರೆ ಮಾಡಿ ಸರಿಯಾದ ಕ್ರಮ ಕೈಗೊಳ್ಳುವಂತೆ ಹೇಳಿದ್ದಾರೆ. ಶಿಕ್ಷಕರಿಂದ ಯಾವುದೇ ಸ್ಪಂದನೆ ಸಿಗದಿದ್ದಾಗ ಆ ಪಾಲಕ, ಆಕ್ಸ್ಫರ್ಡ್ ಪೋಲೀಸ್ ಇಲಾಖೆಗೂ ಕರೆ ಮಾಡಿದ್ದಾರೆ.
ಠಾಣೆಗೆ ಕೇವಲ ಒಂದು ಗಂಟೆಯಲ್ಲಿ ಬರೋಬ್ಬರಿ 18 ಬಾರಿ ಕರೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಫೋನ್ ಮೂಲಕ ಹಿರಿಯ ಪೊಲೀಸ್ ಅಧಿಕಾರಿಯನ್ನು ತಲುಪಲು ಸಾಧ್ಯವಾಗದಿದ್ದಾಗ ಆಡಂ ಅಧಿಕಾರಿಯನ್ನು ಅವರ ಮನೆಯಲ್ಲಿಯೇ ಭೇಟಿಯಾಗುವುದಕ್ಕೆ ಮುಂದಾಗಿದ್ದರು ಎನ್ನಲಾಗಿದೆ. ಹೀಗೆ ಕಿರಿಕಿರಿ ಮಾಡಿದವನನ್ನು ಸದ್ಯ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ವಿಚಿತ್ರ ಘಟನೆ ಇದಾಗಿದ್ದು, ಮಕ್ಕಳಿಗೆ ಒತ್ತಡ ತರುವಷ್ಟು ಹೋಮ್ವರ್ಕ್ ಅನ್ನು ಈ ಶಾಲೆಯಲ್ಲಿ ನೀಡುವುದಿಲ್ಲ ಎಂದು ಕೂಡ ತಿಳಿದು ಬಂದಿದೆ.