ರಾಜ್ಯದಲ್ಲಿ ಮುಂದಿನ ಎರಡು ವಾರ ರಣ ಬಿಸಿಲು ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ಸೂಚಿಸಿದೆ.
ಒಣ ಹವೆ ತೀವ್ರಗೊಳ್ಳಲಿದ್ದು, ಬರಗಾಲದ ಬವಣೆ ಹೆಚ್ಚಾಗಲಿದೆ. ಹೀಗಾಗಿ ಏಪ್ರಿಲ್ 15ರ ವರೆಗೂ ಕಟ್ಟೆಚ್ಚರ ವಹಿಸುವಂತೆ ಎಲ್ಲ ಜಿಲ್ಲಾಡಳಿತಗಳಿಗೆ ಸೂಚಿಸಲಾಗಿದೆ.
ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಮಾಹಿತಿಯಂತೆ, ಏಪ್ರಿಲ್ ನ ಮೊದಲ ಎರಡೂ ವಾರ ಬಿಸಿಲು ಹೆಚ್ಚಾಗಿರಲಿದೆ. ಹೀಗಾಗಿ ಜೀವಜಲಕ್ಕೆ ಹಾಹಾಕಾರ ಮತ್ತಷ್ಟು ತೀವ್ರಗೊಳ್ಳಲಿದೆ. ನಂತರ ಮುಂಗಾರು ಮುನ್ಸೂಚನೆ ಸಿಕ್ಕಿದ್ದು, ಮಳೆಯಾಗುವ ಸಾದ್ಯತೆ ಇದೆ ಎಂದು ಕೂಡ ಹೇಳಿದೆ.
ರಾಜ್ಯದಲ್ಲಿ ಈಗಾಗಲೇ ಕುಡಿಯುವ ನೀರಿನ ಹಾಹಾಕಾರ ಉಂಟಾಗಿದ್ದು, ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಹೀಗಾಗಿ ಜನರು ಮತ್ತು ಆಡಳಿತ ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ. ಹಲವೆಡೆ ಮುಂಗಾರು ಪೂರ್ವ ಮಳೆಯಾಗಿದೆ. ಮಾರ್ಚ್ ತಿಂಗಳ ವಾಡಿಕೆಯ 9 ಮಿ.ಮೀ. ಬದಲಿಗೆ 10 ಮಿ.ಮೀ. ಬೇಸಿಗೆ ಮಳೆಯಾಗಿದ್ದು, ಉಷ್ಣಾಂಶ ಏರಿಕೆಯಿಂದ ಮಳೆಯ ಪ್ರಮಾಣ ಮುಂದಿನ ದಿನಗಳಲ್ಲಿ ಉತ್ತಮವಾಗಿರುತ್ತದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.