ಹೈದರಾಬಾದ್: ಇನ್ನೇನು ರಾಜ್ಯದಲ್ಲಿ ಪರೀಕ್ಷೆ ಮುಗಿಯುತ್ತಿದ್ದಂತೆ ರಜೆ ಘೋಷಿಸಲಾಗುತ್ತಿದೆ. ಹೀಗಾಗಿ ವಿದ್ಯಾರ್ಥಿಗಳು ರಜೆಗಾಗಿ ಕಾಯುತ್ತಿದ್ದಾರೆ. ಆದರೆ, ಇಲ್ಲೊಬ್ಬ ವಿದ್ಯಾರ್ಥಿ ದಯವಿಟ್ಟು ರಜೆ ಬೇಡ ಸರ್ ಎಂದು ಪತ್ರ ಒಂದನ್ನು ಬರೆದಿದ್ದಾನೆ. ಈ ಬಾಲಕನ ಪತ್ರ ಕರುಳು ಹಿಂಡುವಂತಿದ್ದು, ವೈರಲ್ ಆಗುತ್ತಿದೆ.
ಸಾತ್ವಿಕ್ ಎಂಬ ವಿದ್ಯಾರ್ಥಿ ರಜೆ ಬೇಡ ಎಂದು ಶಿಕ್ಷಕರಿಗೆ ಪತ್ರ ಬರೆದಿದ್ದಾನೆ. ಬೇಸಿಗೆ ರಜೆಯಲ್ಲಿ ಮನೆಗೆ ಹೋದರೆ ಅನ್ನ ಸಿಗುವುದಿಲ್ಲ. ಅಜ್ಜ ಮತ್ತು ಅಜ್ಜಿ ಪಿಂಚಣಿ ಹಣದಲ್ಲಿ ಜೀವನ ನಡೆಸುತ್ತಿದ್ದಾರೆ. ಬೇಸಿಗೆ ರಜೆ ಕೊಡಬೇಡಿ. ನಾನು ಶಾಲೆಯಲ್ಲೇ ಇರುತ್ತೇನೆ. ನನಗೆ ಶಾಲೆಯಲ್ಲಿ ಸಿಗುವ ಮಧ್ಯಾಹ್ನದ ಊಟ ತುಂಬಾ ಮುಖ್ಯ ಕಷ್ಟಪಟ್ಟು ಓದಿ ಉನ್ನತ ಮಟ್ಟಕ್ಕೆ ಏರುತ್ತೇನೆ ಎಂದು ಹೇಳುತ್ತಾ ಸಾತ್ವಿಕ್ ಎರಡು ಪುಟಗಳಲ್ಲಿ ತಮ್ಮ ಕಷ್ಟ ಬರೆದುಕೊಂಡಿದ್ದಾನೆ.
ಆತನ ತರಗತಿಯ ಟೀಚರ್ ಸಾತ್ವಿಕ್ ಗೆ ಕರೆ ಮಾಡಿ ಆತನ ಸ್ಥಿತಿ ತಿಳಿದು ಬೇಸರಗೊಂಡಿದ್ದಾರೆ. ಸಾತ್ವಿಕ್ಗೆ ಜನರಿಂದ ಸಹಾಯವಾಗಲಿ ಎಂಬ ಕಾರಣಕ್ಕೆ ಆತ ಬರೆದಿರುವ ಪತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.