ಉಡುಪಿ: ಶಿಕ್ಷಣದಲ್ಲಿ ಮುಂದುವರಿದಿರುವ ಉಡುಪಿ ಜಿಲ್ಲೆಯಲ್ಲಿ ಕಳೆದ ಐದು ವರ್ಷಗಳಿಂದ ಸೈಬರ್ ವಂಚನೆ ಪ್ರಕರಣಗಳು ಆತಂಕಕಾರಿಯಾಗಿ ಹೆಚ್ಚಾಗುತ್ತಿವೆ. ವಿಶೇಷವಾಗಿ ಹಿರಿಯ ನಾಗರಿಕರು, ನಿವೃತ್ತ ಬ್ಯಾಂಕ್ ಅಧಿಕಾರಿಗಳು ಮತ್ತು ಉನ್ನತ ಹುದ್ದೆಗಳಿಂದ ನಿವೃತ್ತರಾದವರೇ ಸೈಬರ್ ವಂಚಕರ ಸುಲಭ ಗುರಿಯಾಗಿದ್ದಾರೆ. ವಂಚಕರು ನಕಲಿ ಲಿಂಕ್ಗಳನ್ನು ಕಳುಹಿಸುವುದು ಮತ್ತು ಗಿಫ್ಟ್ ಹ್ಯಾಂಪರ್ಗಳ ಆಮಿಷವೊಡ್ಡುವ ತಂತ್ರ ಬಳಸಿ ಅವರ ಖಾತೆಯಲ್ಲಿದ್ದ ಲಕ್ಷಾಂತರ ರೂಪಾಯಿ ಹಣವನ್ನು ದೋಚುತ್ತಿದ್ದಾರೆ. ಕೇವಲ ಒಂದು ಸೆಕೆಂಡ್ನಲ್ಲಿ ಲಿಂಕ್ ತೆರೆಯುವುದರಿಂದಲೇ ಜನರು ಹಣ ಕಳೆದುಕೊಳ್ಳುವ ಘಟನೆಗಳು ನಡೆಯುತ್ತಿವೆ.
ಪೊಲೀಸ್ ಇಲಾಖೆ ಕಾರ್ಯಾಗಾರ ಮತ್ತು ಅರಿವು ಕಾರ್ಯಕ್ರಮಗಳನ್ನು ನಡೆಸಿದ್ದರೂ ವಂಚನೆ ಪ್ರಕರಣಗಳು ಕಡಿಮೆಯಾಗಿಲ್ಲ. ಈ ಹಿನ್ನೆಲೆಯಲ್ಲಿ ಹಿರಿಯ ನಾಗರಿಕರ ಮನೆಗಳಿಗೆ ಭೇಟಿ ನೀಡಿ ಜಾಗೃತಿ ಮೂಡಿಸಲು ಮತ್ತು ಮೊಬೈಲ್ ಬಳಕೆ ಬಗ್ಗೆ ಎಚ್ಚರಿಕೆ ನೀಡಲು ಉಡುಪಿ ಎಸ್ಪಿ ವಿಶೇಷ ಯೋಜನೆ ರೂಪಿಸಿದ್ದಾರೆ.


















