ಉತ್ತರ ಕನ್ನಡ: ಜಿಲ್ಲಾ ಉಸ್ತುವಾರಿ ಸಚಿವರಾದ ಬಳಿಕ ಸಚಿವ ಲಕ್ಷ್ಮಣ ಸವದಿ ಅವರು ಕಾರವಾರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಮೊದಲ ಕೆಡಿಪಿ ಸಭೆ ನಡೆಸಿದರು. ಸಭೆಯ ಆರಂಭದಲ್ಲೇ ಅಬಕಾರಿ ಇಲಾಖೆಯ ಕಾರ್ಯವೈಖರಿಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.
ಸಭೆಗೆ ಅಬಕಾರಿ ಡಿಸಿ ಅಮಾನುಲ್ಲಾ ಖಾನ್ ಗೈರು ಹಾಜರಾಗಿದ್ದಕ್ಕೆ ಸಚಿವರು ಗರಂ ಆದರು. ಗೋವಾ ಮತ್ತು ಕರ್ನಾಟಕ ಗಡಿ ಭಾಗದಲ್ಲಿ ಏನೆಲ್ಲಾ ಅವ್ಯವಹಾರ ನಡೆಯುತ್ತಿದೆ ಎಂಬುದು ತಮಗೆ ಗೊತ್ತಿದೆ ಎಂದು ಅವರು ಹೇಳಿದರು.
ಗೋವಾ ರಾಜ್ಯದಿಂದ ಇಲ್ಲಿಗೆ ಮದ್ಯ ಬರುವುದಿಲ್ಲ, ಬದಲಿಗೆ ಇಲ್ಲಿಂದಲೇ ಗೋವಾ ರಾಜ್ಯಕ್ಕೆ ಮದ್ಯ ಸಾಗಣೆಯಾಗುತ್ತದೆ ಎಂದು ಸವದಿ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಕೂಡಲೇ ಅಬಕಾರಿ ಇಲಾಖೆಗೆ ಸಂಬಂಧಿಸಿದ ಅಧಿಕಾರಿಗಳು ಸಭೆಗೆ ಹಾಜರಾಗುವಂತೆ ಸಚಿವ ಲಕ್ಷ್ಮಣ ಸವದಿ ಆದೇಶಿಸಿದರು.

















