ಎನ್.ಆರ್.ಪುರ ತಾಲೂಕಿನ ದೇವದಾನ ಗ್ರಾಮದಲ್ಲಿ ಚುಕ್ಕಿ ಜಿಂಕೆಯನ್ನು ಬೇಟೆಯಾಡಿದ್ದ ಪರಮೇಶ್ವ್ ಗೌಡ ಎಂಬಾತನನ್ನು ಬಾಳೆಹೊನ್ನೂರು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ. ಅಲ್ಲದೇ, ಘಟನೆಯಲ್ಲಿ ಕವೀಶ್, ಪೃಥ್ವಿ ರಾಜ್ ಹಾಗೂ ವಿನಯ್ ಪರಾರಿಯಾಗಿದ್ದು, ಅವರ ಪತ್ತೆಗೆ ಬಲೆ ಬೀಸಲಾಗಿದೆ.
ನಾಲ್ವರು ಸೇರಿ ಉರುಳು ಹಾಕಿ ಚುಕ್ಕಿ ಜಿಂಕೆಯನ್ನು ಶಿಕಾರಿ ಮಾಡಿದ್ದರು. ಮಾಂಸ ಮಾಡಿ ಅಡುಗೆ ಮಾಡುವಾಗ ಸ್ಥಳೀಯರು ಮಾಹಿತಿ ನೀಡಿದ್ದು, ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಆರೋಪಿಗಳು ಜಿಂಕೆಯ ಅವಶೇಷಗಳನ್ನು 10 ಅಡಿ ಆಳದಲ್ಲಿ ಮುಚ್ಚಿಟ್ಟಿದ್ದರು. ಶ್ವಾನ ದಳದ ‘ರೋಜ್ಹಿ’ ಶ್ವಾನವು ಅವಶೇಷಗಳು ಹಾಗೂ ಎರಡು ಮನೆಯಲ್ಲಿ ಅಡುಗೆ ಮಾಡಿದ್ದನ್ನು ಪತ್ತೆಹಚ್ಚಿದೆ. ಆರೋಪಿಗಳ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ.


















