ಬೆಂಗಳೂರಲ್ಲಿ ಪಟಾಕಿ ಸಿಡಿದು ಒಟ್ಟು 65 ಜನರು ಗಾಯಗೊಂಡಿದ್ದಾರೆ. ಮಿಂಟೋ ಆಸ್ಪತ್ರೆಯಲ್ಲಿ ಗಾಯಾಳುಗಳ ಪ್ರಕರಣಗಳ ಸಂಖ್ಯೆ ತೀವ್ರವಾಗಿ ಹೆಚ್ಚಳವಾಗಿದೆ. ನವೆಂಬರ್ 9ರವರೆಗೆ ಮಿಂಟೋ ಆಸ್ಪತ್ರೆಗೆ 20 ಜನರು ದಾಖಲಾಗಿದ್ದಾರೆ.
ನವೆಂಬರ್ 8ರಂದು ಒಂದೇ ದಿನ 12 ಜನರ ಕಣ್ಣಿಗೆ ಗಾಯಗಳಾಗಿವೆ. ಮಿಂಟೋ ಆಸ್ಪತ್ರೆಯಲ್ಲಿ ಗಾಯಾಳುಗಳ ಸಂಖ್ಯೆ ನಿರಂತರವಾಗಿ ಹೆಚ್ಚಾಗುತ್ತಿದೆ. ಗಾಯಗೊಂಡವರಲ್ಲಿ ಇಬ್ಬರಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿದ್ದು, ಮತ್ತಿಬ್ಬರಿಗೆ ಕನ್ಸರ್ವೇಟಿವ್ ಚಿಕಿತ್ಸೆ ನೀಡಲಾಗುತ್ತಿದೆ. ಬಿಜಿಲಿ ಪಟಾಕಿಯಿಂದಾಗಿ 6 ಜನರಿಗೆ ಗಂಭೀರವಾಗಿ ಗಾಯಗಳಾಗಿವೆ. ಪಟಾಕಿ ಸಿಡಿಸುವಾಗ 7 ಮಂದಿಗೆ ಸ್ವಯಂ ಗಾಯಗಳಾಗಿವೆ. ಪಟಾಕಿ ಸಿಡಿತವನ್ನು ವೀಕ್ಷಿಸುತ್ತಿದ್ದ 13 ಮಂದಿಯ ಕಣ್ಣಿಗೆ ಗಂಭೀರ ಗಾಯಗಳಾಗಿವೆ.
















