ಮಂತ್ರಿ ಸ್ಕ್ವೇರ್ ಮೆಟ್ರೋ ನಿಲ್ದಾಣದ ಪ್ರವೇಶ ದ್ವಾರದಲ್ಲೇ ಮೇಲ್ಛಾವಣಿಯ ಶೀಟ್ ಕಿತ್ತುಬಿದ್ದಿದ್ದು, ಅಧಿಕಾರಿಗಳ ಭಾರೀ ನಿರ್ಲಕ್ಷ್ಯ ಎದ್ದುಕಾಣುತ್ತಿದೆ. ಸಂಚರಿಸುವ ಈ ಜಾಗದಲ್ಲಿ ಶೀಟ್ ಪ್ರಯಾಣಿಕರ ಮೇಲೆ ಬೀಳುವ ಅಪಾಯದಲ್ಲಿದ್ದು, ಸಾರ್ವಜನಿಕರಲ್ಲಿ ಜೀವಭಯ ಎದುರಾಗಿದೆ.
ಶೀಟ್ ಕಿತ್ತುಬಿದ್ದು ಎರಡು ಮೂರು ದಿನ ಕಳೆದರೂ ಅಧಿಕಾರಿಗಳು ಯಾವುದೇ ದುರಸ್ತಿ ಕಾರ್ಯ ಕೈಗೊಂಡಿಲ್ಲ. ಮಳೆ ಬಂದರೆ ಮೆಟ್ರೋ ಪ್ರವೇಶಿಸಲು ಪ್ರಯಾಣಿಕರು ಪರದಾಡುವಂತಾಗಿದ್ದು, ದೂರು ನೀಡಿದರೂ ಮೆಟ್ರೋ ಸಿಬ್ಬಂದಿ ಸ್ಪಂದಿಸುತ್ತಿಲ್ಲ ಎಂದು ಸಾರ್ವಜನಿಕರು ತೀವ್ರ ಆಕ್ರೋಶ ಹೊರಹಾಕಿದ್ದಾರೆ.
ಅನಾಹುತ ಸಂಭವಿಸುವ ಮುನ್ನವೇ ಎಚ್ಚೆತ್ತುಕೊಂಡು ತಕ್ಷಣ ದುರಸ್ತಿ ಮಾಡಬೇಕು ಮತ್ತು ಅಪಾಯಕಾರಿ ಪ್ರದೇಶಕ್ಕೆ ಬ್ಯಾರಿಕೇಡ್ ಅಳವಡಿಸಿ ಸುರಕ್ಷತೆ ಒದಗಿಸಬೇಕು ಎಂದು ಪ್ರಯಾಣಿಕರು ಆಗ್ರಹಿಸಿದ್ದಾರೆ.


















