ಪೆಟ್ರೋಲ್ಗೆ ಶೇಕಡಾ 30ಕ್ಕೂ ಹೆಚ್ಚು ಎಥೆನಾಲ್ ಮಿಶ್ರಣ ಮಾಡಲಾಗುತ್ತಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಸಚಿವ ರಿಜ್ವಾನ್ ಅರ್ಷದ್ ವಿಕಾಸಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮತ್ತಷ್ಟು ದಾಖಲೆಗಳನ್ನು ಬಿಡುಗಡೆ ಮಾಡಿದ್ದಾರೆ. ಈ ಗಂಭೀರ ವಿಷಯದ ಬಗ್ಗೆ ಕೇಂದ್ರ ಸರ್ಕಾರವೇ ನೇರವಾಗಿ ಉತ್ತರ ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ.
ತೈಲ ಮಾರಾಟ ಕಂಪನಿಗಳು ನಮ್ಮ ಸ್ಯಾಂಪಲ್ಸ್ ಸರಿಯಿಲ್ಲ ಎಂದು ಹೇಳುತ್ತಿವೆಯಾದರೂ, ನಮ್ಮ ವರದಿ ಸಂಪೂರ್ಣ ಸರಿಯಾಗಿದೆ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ. ಆರು ಕಡೆಗಳಲ್ಲಿ ಕಂಪನಿಗಳೇ ಹೆಚ್ಚುವರಿಯಾಗಿ ಎಥೆನಾಲ್ ಮಿಶ್ರಣ ಮಾಡುತ್ತಿವೆ ಎಂದು ಆರೋಪಿಸಿರುವ ಅವರು, ಎಥೆನಾಲ್ ಮಿಶ್ರಣದಿಂದ ಸಮಸ್ಯೆ ಆಗುತ್ತಿದೆ ಎಂದು ಬಿಎಂಡಬ್ಲ್ಯೂ ಸಂಸ್ಥೆ ಕೂಡ ಹೇಳಿದೆ ಎಂದು ತಿಳಿಸಿದ್ದಾರೆ. ಎಥೆನಾಲ್ ಮಿಶ್ರಣ ಆಟೋಮ್ಯಾಟಿಕ್ ಆಗಿ ನಡೆಯುತ್ತದೆ ಎಂದು ಹೇಳಲಾಗುತ್ತಿದ್ದು, ನಾವು ಜನರ ಪರವಾಗಿ ಧ್ವನಿ ಎತ್ತಿದ್ದೇವೆ ಎಂದು ಸಚಿವರು ಹೇಳಿದ್ದಾರೆ.


















