ನಟ ಪ್ರಥಮ್ ‘ರಾಮಾಯಣ’ ಚಿತ್ರದ ಪರವಾಗಿ ಬ್ಯಾಟಿಂಗ್ ಮಾಡಿದ್ದಾರೆ. ನವೆಂಬರ್ 5 ರಂದು ಬಿಡುಗಡೆಯಾಗಿರುವ ರಾಮಾಯಣ ಚಿತ್ರದ ಬಗ್ಗೆ ಅವರು ಸಾಮಾಜಿಕ ಜಾಲತಾಣದಲ್ಲಿ ತಿಳುವಳಿಕೆ ಪೋಸ್ಟ್ ಹಂಚಿಕೊಂಡಿದ್ದಾರೆ. ‘ಸ್ಪೈಡರ್ ಮ್ಯಾನ್ 3ಡಿ’ ಸಿನಿಮಾ ತೋರಿಸುವುದೇ ಸಾಧನೆಯೇ ಎಂದು ಅವರು ಪ್ರಶ್ನಿಸಿದ್ದಾರೆ. ನಿಮ್ಮ ಮಕ್ಕಳಿಗೆ ಎಷ್ಟು ಜನ ‘ರಾಮಾಯಣ’ ತೋರಿಸಿದ್ದೀರಿ ಎಂದು ಪೋಷಕರನ್ನು ಕೇಳಿದ್ದಾರೆ.
ರಾಮಾಯಣ ಕೇವಲ ಸಿನಿಮಾ ಅಲ್ಲ, ಅದು ವಿಶ್ವಕ್ಕೆ ಮಾದರಿ ಹಾಗೂ ರಾಮ ನಮ್ಮ ಪೂರ್ವಜ ಎಂದು ಅವರು ಹೇಳಿದ್ದಾರೆ. ನೀವೆಲ್ಲ ಯಾವಾಗ ಬುದ್ಧಿ ಕಲಿಯುತ್ತೀರೋ ಎಂದು ಒಳ್ಳೆಹುಡುಗ ಪ್ರಥಮ್ ಕೋಪದಿಂದ ಪೋಸ್ಟ್ ಮಾಡಿದ್ದಾರೆ. ಇದನ್ನು ಕಾಂಟ್ರವರ್ಸಿ ಮಾಡಬೇಡಿ ಎಂದು ಹೇಳಿರುವ ಅವರು ಎಲ್ಲಾ ಪೋಷಕರಿಗೂ ಈ ವಿಷಯವನ್ನು ಶೇರ್ ಮಾಡಲು ಕೋರಿದ್ದಾರೆ.


















