ಸ್ಟಿಂಗ್ ಆಪರೇಷನ್ನಿಂದ ಪಕ್ಷದ ಮೇಲಾಗುತ್ತಿರುವ ದುಷ್ಪರಿಣಾಮ ಹಾಗೂ ತಮ್ಮ ವೈಯಕ್ತಿಕ ಚಾರಿತ್ರ್ಯ ವಧೆಯ ವಿಚಾರವನ್ನು ಸಿದ್ದರಾಮಯ್ಯನವರು ರಾಹುಲ್ ಗಾಂಧಿಯವರ ಜೊತೆಗಿನ ಒನ್ ಟು ಒನ್ ಭೇಟಿಯಲ್ಲಿ ವಿವರವಾಗಿ ತಿಳಿಸಿದ್ದಾರೆ ಎಂದು ಮಾಜಿ ಸಚಿವ ಕೆ.ಎನ್. ರಾಜಣ್ಣ ಹೇಳಿದ್ದಾರೆ.
ಈ ಪ್ರಕರಣದ ಬಗ್ಗೆ ಉನ್ನತ ಮಟ್ಟದ ಸೂಕ್ತ ತನಿಖೆಯಾಗಿ ಸತ್ಯ ಹೊರಬರಬೇಕು ಹಾಗೂ ನಿರಪರಾಧಿಗಳನ್ನು ಸಿಲುಕಿಸಿ ಈ ಕೃತ್ಯ ಎಸಗಿದ ಕಾರಣೀಭೂತರಿಗೆ ಕಾನೂನಿನಡಿ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದ್ದಾರೆ. ಅಭಿವೃದ್ಧಿಗೆ ಗುಜರಾತ್ ಮಾಡೆಲ್ ಎನ್ನುವಂತೆ ಇಂತಹ ಅಪಕೀರ್ತಿಯಿಂದ ಮುಂದಕ್ಕೆ ದೇಶದಲ್ಲಿ ‘ಕರ್ನಾಟಕ ಮಾಡೆಲ್’ ಎಂದು ಹೆಸರಾದರೆ ಕನ್ನಡಿಗರು ತಲೆತಗ್ಗಿಸುವಂತಾಗುತ್ತದೆ ಎಂದಿದ್ದಾರೆ.


















