ವಿಜಯನಗರ:ವಿಶ್ವ ಪಾರಂಪರಿಕ ತಾಣ ಹಂಪಿಗೆ ಯುನೆಸ್ಕೋ ತಜ್ಞರ ತಂಡ ಭೇಟಿ ನೀಡಿದೆ. ಸ್ಮಾರಕಗಳ ಸಂರಕ್ಷಣೆ ಕುರಿತು ಮೂರು ದಿನಗಳ ಕಾಲ ಸೂಕ್ಷ್ಮ ಅಧ್ಯಯನ ನಡೆಯಲಿದೆ. ಅಕ್ಟೋಬರ್ 25 ಮತ್ತು 26ರಂದು ಪ್ರಮುಖ ಸ್ಮಾರಕಗಳ ವೀಕ್ಷಣೆಗೆ ಸಾರ್ವಜನಿಕರಿಗೆ ನಿರ್ಬಂಧ ವಿಧಿಸಲಾಗಿದೆ.
ಹವಾಮಾನ ವೈಪರೀತ್ಯದ ಪರಿಣಾಮ ಹಾಗೂ ಸ್ಮಾರಕಗಳ ಶಿಥಿಲಾವಸ್ಥೆ ತಡೆಗಟ್ಟುವ ಬಗ್ಗೆ ಚರ್ಚೆ ನಡೆಯಲಿದೆ. ಮಾಸ್ಟರ್ ಪ್ಲಾನ್, ಅಭಿವೃದ್ಧಿ ಹಾಗೂ ಪಾರಂಪರಿಕ ಸಂರಕ್ಷಣೆಯ ನಡುವಿನ ಸಮತೋಲನಕ್ಕೆ ತಜ್ಞರು ಒತ್ತು ನೀಡಲಿದ್ದಾರೆ.



















