ಬೆಂಗಳೂರು:ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಸ್ಟಿಂಗ್ ಬಗ್ಗೆ ಮತ್ತೊಮ್ಮೆ ಗುಡುಗಿದ್ದಾರೆ. ರಾಜ್ಯ ಸರ್ಕಾರ ಹಾಗೂ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಿನ್ನೆ ದೆಹಲಿಗೆ ತೆರಳಿದ್ದ ಸಿಎಂ, ಡಿಕೆಶಿ ಹಾಗೂ ಹೋಮ್ ಮಿನಿಸ್ಟರ್ ಹೈಕಮಾಂಡ್ ನಾಯಕರನ್ನು ಭೇಟಿಯಾಗಿ, ರಾಜ್ಯದ ಸ್ಟಿಂಗ್ ಆಪರೇಷನ್ ಬಗ್ಗೆ ಜೆಡಿಎಸ್ ರಾಜಕೀಯವಾಗಿ ಪ್ರಸ್ತಾಪಿಸುತ್ತಿದೆ ಎಂದು ಹೇಳಿಕೊಂಡಿದ್ದಾರೆ. ಎರಡು ಬಾರಿ ಸಿಎಂ ಆಗಿರುವ ಸಿದ್ದರಾಮಯ್ಯ ಅವರಿಗೆ ಕೆಟ್ಟ ಸ್ಥಿತಿ ನಿರ್ಮಾಣವಾಗಿದ್ದರೂ ಇದನ್ನು ಸಿಎಂ ಹಗುರವಾಗಿ ಪರಿಗಣಿಸಿದ್ದಾರೆ.
ಸ್ಟಿಂಗ್ ಮಾಡಿರುವ ವ್ಯಕ್ತಿ ಸಿಎಂಗೆ ತೀರಾ ಆತ್ಮೀಯನಾಗಿದ್ದು, ಮೊನ್ನೆ ರಾತ್ರಿ ರಾಡಿಸನ್ ಹೋಟೆಲ್‌ನಲ್ಲಿದ್ದ ಆತನನ್ನು ಕರೆದುಕೊಂಡು ಬರಲಾಗಿದೆ. ಪ್ರಸ್ತುತ ಸರ್ಕಾರ ಈ ವ್ಯಕ್ತಿಗೆ ನಿರಂತರವಾಗಿ ಬೆಂಬಲ ನೀಡುತ್ತಿದ್ದು, ಕೇವಲ ಕಾಟಾಚಾರಕ್ಕೆ ಸಮನ್ಸ್ ನೀಡಿದೆ. ಪ್ರಸ್ತುತ ತನಿಖೆ ನಡೆಸುತ್ತಿರುವ ಅಜಯ್ ಹಿಲೋರಿ ಅವರ ಮೇಲೆ ಐಎಂಎ ಕೇಸ್ ಇದ್ದರೂ ಅಡ್ವೊಕೇಟ್ ನೇಮಕ ಮಾಡಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

















