ಬಿಜೆಪಿ ಮತ್ತು ಜೆಡಿಎಸ್ ಸಂಘಟನೆಯ ಶಕ್ತಿಯಿಂದ ಈ ಚುನಾವಣೆಯಲ್ಲಿ ನಾವು ಗೆಲ್ಲಲಿದ್ದೇವೆ. ಇದು 2028ರಲ್ಲಿ ಕರ್ನಾಟಕದಲ್ಲಿ ಎನ್ಡಿಎ ಸರ್ಕಾರ ರಚನೆಗೆ ಭದ್ರ ಬುನಾದಿ ಆಗಲಿದೆ ಎಂದು ದಾವಣಗೆರೆಯಲ್ಲಿ ಎನ್ಡಿಎ ಅಭ್ಯರ್ಥಿ ಕೆ.ಎಂ. ಸುರೇಶ್ ಹೇಳಿಕೆ ನೀಡಿದ್ದಾರೆ. ಮೊದಲಿನಿಂದಲೂ ಈ ಕ್ಷೇತ್ರ ಬಿಜೆಪಿ ಮತ್ತು ಜೆಡಿಎಸ್ನ ಭದ್ರ ಕೋಟೆಯಾಗಿದ್ದು, ನೂರಕ್ಕೆ ನೂರು ವಿಶ್ವಾಸದೊಂದಿಗೆ ಈ ಕ್ಷೇತ್ರವನ್ನು ಉಳಿಸಿಕೊಳ್ಳುತ್ತೇವೆ ಎಂದು ಅವರು ದೃಢ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಜೆಡಿಎಸ್ನವರು ಜೊತೆಗೆ ನಿಂತೇ ಕೆಲಸ ಮಾಡುತ್ತಿದ್ದು, ಎಚ್.ಡಿ. ಕುಮಾರಸ್ವಾಮಿ ಅವರು ನಮ್ಮ ಪರ ನಿಂತು ಪ್ರಚಾರ ಮಾಡಿದ್ದಾರೆ. ಸದ್ಯ ಎಲ್ಲಾ ನಾಯಕರು ಆರು ಜಿಲ್ಲೆಗಳನ್ನು ಹಂಚಿಕೊಂಡು ಪ್ರವಾಸ ಮಾಡುತ್ತಿದ್ದು, ಈ ದೇಶ ಉಳಿಯಲು ನರೇಂದ್ರ ಮೋದಿ ಅವರ ನೇತೃತ್ವ ಬೇಕು ಎಂದು ಕೆ.ಎಂ. ಸುರೇಶ್ ತಿಳಿಸಿದ್ದಾರೆ.



















