ಬಾಲಿವುಡ್ ನಟ ಟೈಗರ್ ಶ್ರಾಫ್ ದಾಳಿ ಪ್ರಕರಣದ ಬೆನ್ನಲ್ಲೇ, ನಟ ರಣಬೀರ್ ಕಪೂರ್ ಅವರ ಮೇಲೂ ದಾಳಿ ನಡೆಸಲು ಸ್ಕೆಚ್ ಹಾಕಿರುವುದು ಮುಂಬೈ ಪೊಲೀಸರ ತನಿಖೆಯಿಂದ ಬಯಲಾಗಿದೆ. ಬಿಷ್ನೋಯ್ ಗ್ಯಾಂಗ್ನ ಮುಂದಿನ ಟಾರ್ಗೆಟ್ ರಣಬೀರ್ ಕಪೂರ್ ಆಗಿದ್ದಾರೆ ಎಂಬ ಆಘಾತಕಾರಿ ಮಾಹಿತಿಯನ್ನು ಪೊಲೀಸರು ನೀಡಿದ್ದಾರೆ. ಸದ್ಯ ಬಿಷ್ನೋಯ್ ಗ್ಯಾಂಗ್ ಕೆಲವು ಸ್ಟಾರ್ ನಟರ ಮೇಲೆ ಗಮನ ನೆಟ್ಟಿದ್ದು, ದುಷ್ಕರ್ಮಿಗಳು ರಣಬೀರ್ ಚಲನವಲನದ ಮೇಲೂ ಕಣ್ಣಿಟ್ಟಿದ್ದಾರೆ.
ಪ್ರಸ್ತುತ ‘ರಾಮಾಯಣ’ ಚಿತ್ರದ ಪ್ರಚಾರದಲ್ಲಿ ರಣಬೀರ್ ಬ್ಯುಸಿಯಾಗಿದ್ದು, ಮುಂಬೈ ಬಾಂದ್ರಾದಲ್ಲಿರುವ ಅವರ ನಿವಾಸಕ್ಕೆ ಪೊಲೀಸರು ಬಿಗಿ ಭದ್ರತೆ ಕಲ್ಪಿಸಿದ್ದಾರೆ. ಭದ್ರತೆಯ ಭಾಗವಾಗಿ ರಣಬೀರ್ ಅವರ ಮನೆ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ತೀವ್ರ ಪರಿಶೀಲನೆ ನಡೆಸುತ್ತಿದ್ದಾರೆ.



















