ಮೈಸೂರು:ವಿಶ್ವ ವಿಖ್ಯಾತ ನಾಡಹಬ್ಬ ದಸರಾ ಮಹೋತ್ಸವದ ಅಂಗವಾಗಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಮಾವುತ ಹಾಗೂ ಕಾವಾಡಿಗಳ ಕುಟುಂಬಕ್ಕೆ ಉಪಹಾರ ಕೂಟ ಆಯೋಜಿಸಿದ್ದಾರೆ. ಮೈಸೂರು ಅರಮನೆ ಅಂಗಳದಲ್ಲಿ ಈ ವಿಶೇಷ ಉಪಹಾರದ ವ್ಯವಸ್ಥೆ ಮಾಡಲಾಗಿತ್ತು.
ಶೋಭಾ ಕರಂದ್ಲಾಜೆ ಅವರು ಪ್ರತಿವರ್ಷವೂ ಮಾವುತರಿಗೆ ಈ ರೀತಿ ಉಪಹಾರ ಕೂಟ ಆಯೋಜಿಸಿಕೊಂಡು ಬರುತ್ತಿದ್ದಾರೆ. ಕಾರ್ಯಕ್ರಮದಲ್ಲಿ ಮಾವುತರಿಗೆ ತಾವೇ ಕೈಯಾರೆ ಒಬ್ಬಟ್ಟು ಹಾಗೂ ತಿಂಡಿ ಬಡಿಸಿದ್ದಾರೆ. ಈ ಸಂದರ್ಭದಲ್ಲಿ ಸಚಿವೆಗೆ ಸ್ಥಳೀಯ ಶಾಸಕ ಶ್ರೀವತ್ಸ ಹಾಗೂ ಬಿಜೆಪಿ ನಾಯಕರು ಸಾಥ್ ನೀಡಿದರು.



















