ಮೈಸೂರು:ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವದ ಎರಡನೇ ದಿನದಂದು ಭರ್ಜರಿಯಾಗಿ ಡ್ರೋನ್ ಶೋ ನಡೆದಿದೆ. ಈ ಡ್ರೋನ್ ಶೋ ನಿಂದ ಸೆಸ್ಕ್ ಮುಕುಟಕ್ಕೆ ಮತ್ತೊಂದು ಗಿನ್ನಿಸ್ ದಾಖಲೆ ಲಭಿಸಿದೆ. ಡ್ರೋನ್ ನಲ್ಲಿ ನವಿಲಿನ ವಿನ್ಯಾಸವನ್ನು ಮೂಡಿಸಿದ್ದಕ್ಕೆ ಈ ಗಿನ್ನಿಸ್ ದಾಖಲೆ ಸಿಕ್ಕಿದೆ.
ಒಟ್ಟು 3473 ಡ್ರೋನ್ ಗಳಿಂದ ನವಿಲಿನ ವಿನ್ಯಾಸವನ್ನು ರಚನೆ ಮಾಡಲಾಗಿತ್ತು. ಕಳೆದ ವರ್ಷದ ಡ್ರೋನ್ ಶೋ ನಲ್ಲಿ ಡ್ರೋನ್ ಮೂಲಕ ಹುಲಿಯ ಚಿತ್ರವನ್ನು ರಚಿಸಿ ಸೆಸ್ಕ್ ಗಿನ್ನಿಸ್ ದಾಖಲೆ ಬರೆದಿತ್ತು. ಈ ಬಾರಿಯ ಡ್ರೋನ್ ಪ್ರದರ್ಶನದ ನಂತರ, ಲಂಡನ್ ನಿಂದ ಆಗಮಿಸಿದ್ದ ಗಿನ್ನಿಸ್ ಬುಕ್ ಅಫ್ ವರ್ಲ್ಡ್ ರೆಕಾರ್ಡ್ ತಂಡದಿಂದ ಗಿನ್ನಿಸ್ ದಾಖಲೆಯ ಅಧಿಕೃತ ಘೋಷಣೆ ಹೊರಬಿದ್ದಿದೆ.


















