ಮೈಸೂರು:ದಸರಾ ತಾಯಿ ಚಾಮುಂಡಿಯ ಹಬ್ಬವಾಗಿದೆ. ತಾಯಿ ಅನುಗ್ರಹಕ್ಕೆ ಕಂಬಳವನ್ನು ಮೈಸೂರಿಗೆ ತಂದಿದ್ದೇವೆ. ರೈತರ ಬದುಕನ್ನು ಸಂತೋಷ ಪಡಿಸಲು ಕಂಬಳ ಪ್ರಾರಂಭವಾಗಿದೆ. ತಮಿಳುನಾಡಿನಲ್ಲಿ ಜಲ್ಲಿಕಟ್ಟು ಕಾರ್ಯಕ್ರಮ ನಡೆಯುತ್ತಿದೆ. ಕಂಬಳ ಆಚರಣೆಗೆ ಕಾನೂನಿನಲ್ಲಿ ಅವಕಾಶ ಸಿಕ್ಕಿದೆ. ಕಂಬಳ ವೀಕ್ಷಣೆ ಮಾಡಲು ಉಡುಪಿ, ಮಂಗಳೂರು ಭಾಗದಿಂದ ಜನರು ಬಂದಿದ್ದಾರೆ. ದಸರಾಗೆ ಕೇವಲ ಕಂಬಳವನ್ನು ತಂದಿಲ್ಲ.
ಕರಾವಳಿಯ ಸಂಸ್ಕೃತಿಯನ್ನು ಮೈಸೂರು ದಸರಾ ಮೂಲಕ ನಾಡಿಗೆ ಪರಿಚಯಿಸಲು ಮೈಸೂರಿಗೆ ಕಂಬಳ ತಂದಿದ್ದೇವೆ. ನಾವು ಕೃಷಿಯನ್ನು ಗೌರವಿಸುತ್ತೇವೆ. ಕಂಬಳ ನಡೆಸಬೇಕು ಎಂದಾಗ ಟೀಕೆಗಳು ಪ್ರಾರಂಭ ಆದವು. ನಾನು ಟೀಕೆಗಳು ಸಿಗುತ್ತವೆ, ಮಾಡುವ ಕೆಲಸ ಉಳಿಯುತ್ತದೆ ಎನ್ನುವ ನಂಬಿಕೆ ಇಟ್ಟುಕೊಂಡಿದ್ದೇನೆ. ಕಂಬಳ ವೀಕ್ಷಣೆ ಮಾಡಲು ಬಂದಿರುವ ಎಲ್ಲರಿಗೂ ಕರ್ನಾಟಕ ಸರ್ಕಾರದ ಪರವಾಗಿ ಅಭಿನಂದನೆ ತಿಳಿಸುತ್ತೇನೆ ಎಂದಿದ್ದಾರೆ.



















