ಮೈಸೂರು:ದಸರಾ ಕಂಬಳ ಕಾರ್ಯಕ್ರಮದಲ್ಲಿ ಪುತ್ತೂರು ಶಾಸಕ ಅಶೋಕ ಕುಮಾರ್ ರೈ ಭಾಷಣ ಮಾಡಿದರು. ಮೈಸೂರಿನಲ್ಲಿ ಕಂಬಳ ಆಯೋಜನೆಗೆ ಮುಖ್ಯ ಕಾರಣ ಡಿಕೆ ಶಿವಕುಮಾರರವರು ಎಂದು ತಿಳಿಸಿದರು. ಅವರ ನಿರ್ದೇಶನ ಇಲ್ಲದಿದ್ದರೆ ಬೆಂಗಳೂರು ಹಾಗೂ ಮೈಸೂರಿನಲ್ಲಿ ಕಂಬಳ ಆಯೋಜನೆ ಮಾಡಲು ಆಗುತ್ತಿರಲಿಲ್ಲ ಎಂದರು. ಕಳೆದ ಬಾರಿ ದಸರಾದಲ್ಲಿಯೇ ಕಂಬಳ ಆಚರಣೆ ಮಾಡಬೇಕಿತ್ತಾದರೂ ಸಮಯ ಇರಲಿಲ್ಲ. ಆದರೆ ಈ ಬಾರಿ ದಸರಾದಲ್ಲಿ ಕಂಬಳ ಆಯೋಜನೆ ಮಾಡಲೇಬೇಕು ಎಂದು ಅವರು ಹೇಳಿದ್ದರು.
ಕಂಬಳದ ಬಗ್ಗೆ ಮೈಸೂರಿನಲ್ಲಿ ಸ್ವಲ್ಪ ಗೊಂದಲವಿತ್ತು. ರಾಜ್ಯದಲ್ಲಿ ಬರಗಾಲವಿದ್ದು, ಕಂಬಳದ ಕರೆಯ ಪೂಜೆ ಮಾಡಿದ ನಂತರ ನಿನ್ನೆ ಬೆಳಗ್ಗೆಯಿಂದ ಮಳೆಯಾಗುತ್ತಿದೆ. ಕಂಬಳ ಆರಂಭದೊಂದಿಗೆ ದೇವರು ಈ ಭಾಗಕ್ಕೆ ಮಳೆಯನ್ನು ಕೊಡುತ್ತಿದ್ದಾನೆ. ಕಂಬಳದ ಕೋಣ ಸಾಕುವುದಕ್ಕೆ ಲಕ್ಷಾಂತರ ಹಣ ಖರ್ಚಾಗುತ್ತದೆ. ಕೋಣದ ಮಾಲೀಕರು ತಮ್ಮ ಮನೆಯಿಂದಲೇ ತಂದು ಕೋಣಗಳಿಗೆ ಕುಡಿಸುತ್ತಾರೆ.



















