ಕೊಪ್ಪಳ:ದಸರಾ ಮತ್ತು ದೀಪಾವಳಿ ಹಬ್ಬಗಳ ಹಿನ್ನೆಲೆಯಲ್ಲಿ ಆಹಾರ ಇಲಾಖೆ ಅಧಿಕಾರಿಗಳು ಸ್ವೀಟ್ ತಯಾರಿಕಾ ಘಟಕಗಳ ಮೇಲೆ ಹದ್ದಿನ ಕಣ್ಣಿಟ್ಟಿದ್ದಾರೆ. ಕೊಪ್ಪಳದಲ್ಲೂ ದಾಳಿ ನಡೆಸಿದ್ದಾರೆ. ಕೊಪ್ಪಳದ ಬಸವೇಶ್ವರ ರಾಜಸ್ಥಾನ್ ಸ್ವೀಟ್ ತಯಾರಿಕಾ ಘಟಕದ ಮೇಲೆ ಅಧಿಕಾರಿಗಳು ದಾಳಿ ಮಾಡಿದ್ದಾರೆ.
ದಾಳಿ ನಡೆಸಿದ ಆಹಾರ ಇಲಾಖೆ ಅಧಿಕಾರಿಗಳು ಸ್ವೀಟ್ ತಯಾರಿಕಾ ಘಟಕದಲ್ಲಿ ಸ್ಯಾಂಪಲ್ಗಳನ್ನು ಕಲೆಕ್ಟ್ ಮಾಡಿದ್ದಾರೆ.



















