ಮೈಸೂರು: ನಾಡಹಬ್ಬ ದಸರಾ ಮಹೋತ್ಸವ 2026ರ ಅಂಗವಾಗಿ ಇಂದು ಕೊನೆಯಾಗಬೇಕಿದ್ದ ಯುವ ದಸರಾ ನಾಳೆಗೆ ಕೊನೆಗೊಳ್ಳಲಿದೆ. ಮೊನ್ನೆ ಮಳೆಯಿಂದಾಗಿ ರದ್ದಾಗಿದ್ದ ಖ್ಯಾತ ಗಾಯಕ ಸಿದ್ ಶ್ರೀರಾಮ್ ಕಾರ್ಯಕ್ರಮವನ್ನು ಪುನಃ ನಡೆಸಲು ನಿರ್ಧರಿಸಲಾಗಿದೆ.
ನಾಳೆ ಯುವ ದಸರಾದಲ್ಲಿ ಸಿದ್ ಶ್ರೀರಾಮ್ ಅವರಿಂದ ಭರ್ಜರಿ ಸಂಗೀತ ಕಾರ್ಯಕ್ರಮ ನಡೆಯಲಿದ್ದು, ಈ ಕುರಿತು ಯುವ ದಸರಾ ಉಪಸಮಿತಿ ಅಧಿಕೃತ ಮಾಹಿತಿ ನೀಡಿದೆ.


















