ಬೆಂಗಳೂರು: ಗೃಹಜ್ಯೋತಿ ಯೋಜನೆಯ 15 ರಿಂದ 16 ಲಕ್ಷ ಫಲಾನುಭವಿಗಳಿಂದ ಯಾವುದೇ ಸ್ಪಂದನೆ ಸಿಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಬೆಸ್ಕಾಂ ಸಿಬ್ಬಂದಿ ಮನೆಮನೆಗೆ ತೆರಳಿ ಪರಿಶೀಲನೆ ನಡೆಸಿದ್ದು, ಯೋಜನೆಯ ಫಲಾನುಭವಿಗಳ ಸಂಖ್ಯೆ ಕಡಿಮೆಯಾಗುವ ಸಾಧ್ಯತೆಯಿದೆ. ಸದ್ಯಫಲಾನುಭವಿಗಳಿಗೆ ಮತ್ತೆ 10 ದಿನಗಳ ಕಾಲಾವಕಾಶ ನೀಡಲಾಗಿದೆ.
ಒಂದು ವೇಳೆ ಪರಿಶೀಲನೆ ತಪ್ಪಿದರೂ ನಂತರ ಮತ್ತೆ ಯೋಜನೆಗೆ ಸೇರಲು ಅವಕಾಶ ಕಲ್ಪಿಸಲಾಗಿದೆ. ಇನ್ನುಳಿದಂತೆ ಈ ಫಲಾನುಭವಿಗಳ ಭವಿಷ್ಯ ಸರ್ಕಾರದ ಮುಂದಿನ ನಿರ್ಧಾರದ ಮೇಲೆ ನಿಂತಿದೆ.



















