ಮೈಸೂರು:ವಿಶ್ವ ವಿಖ್ಯಾತ ಮೈಸೂರು ದಸರಾ ಸಂಭ್ರಮ 7 ನೇ ದಿನಕ್ಕೆ ಕಾಲಿಟ್ಟಿದೆ. ಮಹೋತ್ಸವದ ಪ್ರಯುಕ್ತ ಟೌನ್ ಹಾಲ್ ಆವರಣದಲ್ಲಿ ಪಾರಂಪರಿಕ ಟಾಂಗಾ ಸವಾರಿ ಆಯೋಜಿಸಲಾಗಿದ್ದು, ನಟಿ ಅಕ್ಷತಾ ಪಾಂಡವಪುರ ದೀಪ ಬೆಳಗಿ ಚಾಲನೆ ನೀಡಿದ್ದಾರೆ. 25 ರಿಂದ 60 ವರ್ಷದವರೆಗಿನ 40ಕ್ಕೂ ಹೆಚ್ಚು ದಂಪತಿಗಳು ಪಾರಂಪರಿಕ ಉಡುಗೆ ತೊಟ್ಟು, ಮೈಸೂರು ಪೇಟೆ ಧರಿಸಿ ಹಾಗೂ ಮಲ್ಲಿಗೆ ಮುಡಿದು ಸವಾರಿಯಲ್ಲಿ ಭಾಗವಹಿಸಿದ್ದಾರೆ.
ದಂಪತಿಗಳು ಟೌನ್ ಹಾಲ್ನಿಂದ ಹೊರಟು ದೊಡ್ಡ ಗಡಿಯಾರ, ಹತ್ತನೇ ಚಾಮರಾಜ ಒಡೆಯರ್ ವೃತ್ತ, ಲ್ಯಾನ್ಸ್ ಡೌನ್ ಕಟ್ಟಡ ಸೇರಿದಂತೆ ಹಲವು ಪಾರಂಪರಿಕ ಕಟ್ಟಡಗಳನ್ನು ಟಾಂಗಾದಲ್ಲಿ ವೀಕ್ಷಿಸಿದರು. ಇತಿಹಾಸ ತಜ್ಞರಾದ ರಂಗರಾಜು ಮತ್ತು ಡಾ. ಶೆಲ್ವಪಿಳ್ಳೈ ಅಯ್ಯಂಗಾರ್ ಅವರು ದಂಪತಿಗಳಿಗೆ ಈ ಪಾರಂಪರಿಕ ಕಟ್ಟಡಗಳ ಪರಿಚಯ ಮಾಡಿಕೊಟ್ಟರು.



















