ಬೆಂಗಳೂರು :ರಾಜ್ಯದಲ್ಲಿ ಸ್ಟಿಂಗ್ ಆಪರೇಷನ್ ಮಾಡಲು ಕೆಲವರು ಫ್ಯಾಕ್ಟರಿಗಳನ್ನೇ ನಡೆಸುತ್ತಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷರ ಒಂದು ಫ್ಯಾಕ್ಟರಿ ಹಾಗೂ ಡಿ.ಕೆ. ಶಿವಕುಮಾರ್ ಅವರ ಮತ್ತೊಂದು ಫ್ಯಾಕ್ಟರಿ ಇದೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆರೋಪಿಸಿದ್ದಾರೆ.
ವೀಡಿಯೊ ಎಡಿಟ್ ಮಾಡುವುದರಲ್ಲಿ ಇವರು ಅತ್ಯಂತ ನಿಪುಣರು. ಬಿಜೆಪಿ ಮೇಲಿನ ಬ್ಲ್ಯಾಕ್ಮೇಲ್ ಮಾಹಿತಿ ರಾಜ್ಯಾಧ್ಯಕ್ಷರ ಕೈಗೆ ಹೋಗುತ್ತದೆ. ಮುಖ್ಯಮಂತ್ರಿ ಮೇಲಿನ ಬ್ಲ್ಯಾಕ್ಮೇಲ್ ಮಾಹಿತಿ ಡಿ.ಕೆ. ಶಿವಕುಮಾರ್ ಕೈಗೆ ತಲುಪುತ್ತದೆ. ಕುಮಾರಸ್ವಾಮಿ ಅವರ ಮೇಲೆ ಆರೋಪ ಮಾಡುವುದಾದರೆ, ಮೊದಲು ಅವರನ್ನೇ ಬಂಧಿಸಿ ನೋಡೋಣ. ವಿಜಯೇಂದ್ರ ಹಿಂದಿರುವ ಚೇಲಾಗಳು ಹಾಗೂ ಡಿಕೆಶಿ ಹಿಂದಿರುವ ಚೇಲಾಗಳು ಇಬ್ಬರನ್ನೂ ಕೂಡಲೇ ಬಂಧಿಸಿ ಕರೆತನ್ನಿ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಆಗ್ರಹಿಸಿದ್ದಾರೆ.
















