ಬೆಂಗಳೂರು: ವಿಧಾನಸೌಧಕ್ಕೆ ಬಂದು ನನಗೆ 47 ವರ್ಷ ಆಯಿತು. ಇಂತಹ ಸ್ಟಿಂಗ್ ವಿಚಾರ ಹಿಂದೆಂದೂ ಇರಲಿಲ್ಲ. ಇದನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ ಎಂದು ವಿಪ ಸದಸ್ಯ ಬಸವರಾಜ ಹೊರಟ್ಟಿ ಬೇಸರ ವ್ಯಕ್ತಪಡಿಸಿದ್ದಾರೆ.
ರಾಜ್ಯದ ಸಿಎಂ ಆಗಿ ಕೆಲಸ ಮಾಡಿದ ಹಿರಿಯ ನಾಯಕ ಸಿದ್ದರಾಮಯ್ಯ. ಇಂತಹವರಿಗೆ ಹೀಗಾಗಿರುವುದು ಆತಂಕಕಾರಿ. ಇದನ್ನು ಯಾರು ಮಾಡುತ್ತಿದ್ದಾರೆ ಎಂಬುದನ್ನು ಪತ್ತೆ ಹಚ್ಚಬೇಕು. ಸಿದ್ದರಾಮಯ್ಯ ಅವರಂತವರಿಗೆ ಹೀಗಾದರೆ, ಇನ್ನುಳಿದವರ ಪರಿಸ್ಥಿತಿ ಏನಾಗಬೇಕು? ಈ ಕೂಡಲೇ ಈ ಪ್ರಕರಣವನ್ನು ಕೇಂದ್ರ ತನಿಖಾ ಸಂಸ್ಥೆಗಳಿಂದ ತನಿಖೆ ಮಾಡಿಸಬೇಕು ಎಂದು ಆಗ್ರಹಿಸಿದ್ದಾರೆ.

















