ಬೆಂಗಳೂರು: ಷೇರು ಮಾರುಕಟ್ಟೆ ದಿನೇದಿನೆ ಕುಸಿಯುತ್ತಿದೆ. ಷೇರು ಖರೀದಿ, ಮ್ಯೂಚುವಲ್ ಫಂಡ್ ಎಸ್ಐಪಿ ಸೇರಿ ಹಲವು ಮಾದರಿಯಲ್ಲಿ ಹೂಡಿಕೆ ಮಾಡಿದವರು ನಷ್ಟ ಅನುಭವಿಸುತ್ತಿದ್ದಾರೆ. ಹಾಗೆಯೇ, ರೆಪೋದರ ಏರಿಕೆ ಮಾಡಿರುವುದರಿಂದ ಬ್ಯಾಂಕುಗಳು ಎಫ್.ಡಿ ಮೇಲಿನ ಬಡ್ಡಿ ಹೆಚ್ಚಿಸುವ ಸಾಧ್ಯತೆ ಇದೆ. ಹಾಗಾಗಿ, ಜನರು ಸುರಕ್ಷಿತವಾಗಿ ಹಣ ಹೂಡಿಕೆ ಮಾಡಿ, ನಿಶ್ಚಿತ ಆದಾಯ ಪಡೆಯಲು ಎಫ್.ಡಿ ಹೂಡಿಕೆ ಮಾಡುವುದು ಸೂಕ್ತ ಎಂದು ಹೇಳಲಾಗುತ್ತಿದೆ. ನಿಮ್ಮ ಬಳಿ 10 ಲಕ್ಷ ರೂ. ಇದ್ದು, ಅದನ್ನು ಎಫ್.ಡಿ ಇರಿಸಿದರೆ ಎಷ್ಟು ಆದಾಯ ಗಳಿಸಬಹುದು? ಇಲ್ಲಿದೆ ನೋಡಿ ಲೆಕ್ಕಾಚಾರ.
ಇಲ್ಲಿದೆ ಬಡ್ಡಿ ಲೆಕ್ಕಾಚಾರ
• ವಾರ್ಷಿಕ ಶೇ.6% ಬಡ್ಡಿದರದಲ್ಲಿ 10 ಲಕ್ಷ ರೂಪಾಯಿಗೆ ವರ್ಷಕ್ಕೆ 60 ಸಾವಿರ ರೂ. ಬಡ್ಡಿ ಸಿಗುತ್ತದೆ. ಇದನ್ನು ತಿಂಗಳಿಗೆ ವಿಂಗಡಿಸಿದಾಗ ಸುಮಾರು 5 ಸಾವಿರ ರೂ. ಆದಾಯ ಸಿಗುತ್ತದೆ.
• ಶೇ. 6.5% ಬಡ್ಡಿದರದಲ್ಲಿ, ವಾರ್ಷಿಕ ಬಡ್ಡಿ 65 ಸಾವಿರ ರೂ. ಆಗಲಿದ್ದು, ಮಾಸಿಕ ಸುಮಾರು 5,417 ರೂ. ಸಿಗುತ್ತದೆ.
• ಶೇ.7% ಬಡ್ಡಿದರದಲ್ಲಿ, ವಾರ್ಷಿಕ ಬಡ್ಡಿ 70 ಸಾವಿರ ರೂ. ಆಗಲಿದ್ದು, ಮಾಸಿಕ ಸುಮಾರು 5,833 ರೂ. ಸಿಗುತ್ತದೆ.
• ಶೇ.7.5% ಬಡ್ಡಿದರದಲ್ಲಿ, ವರ್ಷಕ್ಕೆ 75 ಸಾವಿರ ರೂ. ಅಥವಾ ತಿಂಗಳಿಗೆ ಸುಮಾರು 6,250 ರೂ. ಸಿಗುತ್ತದೆ.
• ಶೇ.8% ಬಡ್ಡಿದರದಲ್ಲಿ, ವಾರ್ಷಿಕ ಬಡ್ಡಿ 80 ಸಾವಿರ ರೂ. ಆಗಲಿದ್ದು, ಮಾಸಿಕ ಸುಮಾರು 6,667 ರೂ. ಆದಾಯ ಸಿಗುತ್ತದೆ.
ಯಾವ ಬ್ಯಾಂಕ್ ಎಷ್ಟು ಬಡ್ಡಿ ನೀಡುತ್ತದೆ?
ಎಫ್.ಡಿ ಬಡ್ಡಿದರಗಳು ಬ್ಯಾಂಕ್ ನಿಂದ ಬ್ಯಾಂಕ್ ಗೆ ವ್ಯತ್ಯಾಸವಾಗುತ್ತವೆ ಮತ್ತು ಆಯ್ಕೆ ಮಾಡಿದ ಅವಧಿಯ ಮೇಲೆಯೂ ಅವಲಂಬಿತವಾಗಿರುತ್ತವೆ. ಎಸ್.ಬಿ.ಐ ಮತ್ತು ಎಚ್.ಡಿ.ಎಫ್.ಸಿ ಬ್ಯಾಂಕ್ ನಂತಹ ಪ್ರಮುಖ ಬ್ಯಾಂಕುಗಳು ನಿರ್ದಿಷ್ಟ ಅವಧಿಗಳಿಗೆ ಶೇ.6ರಿಂದ ಶೇ.6.5ರಷ್ಟು ಬಡ್ಡಿ ನೀಡುತ್ತವೆ. ಕೆಲವು ಸಣ್ಣ ಹಣಕಾಸು ಬ್ಯಾಂಕುಗಳು ಆಯ್ಕೆಮಾಡಿದ ಅವಧಿಗಳ ಮೇಲೆ ಹೆಚ್ಚಿನ ಬಡ್ಡಿದರಗಳನ್ನು ನೀಡುತ್ತವೆ. ಎಯು ಸ್ಮಾಲ್ ಫೈನಾನ್ಸ್ ಬ್ಯಾಂಕ್ ಮತ್ತು ಜನಾ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಗಳು ಶೇ.7-8ರಷ್ಟು ಬಡ್ಡಿ ನೀಡುತ್ತವೆ.
ಇದನ್ನೂ ಓದಿ :ಕೇಂದ್ರ ಸರ್ಕಾರದ ಉಡುಪಿ ಕೊಚ್ಚಿನ್ ಶಿಪ್ ಯಾರ್ಡ್ ನಲ್ಲಿ ನೇಮಕಾತಿ : 1.10 ಲಕ್ಷ ರೂ. ಸ್ಯಾಲರಿ


















