ಬೆಂಗಳೂರು: ಪತಂಜಲಿ ಯೋಗ ಸಂಸ್ಥೆಯ ಸಹಯೋಗದಲ್ಲಿ ಸ್ಪರ್ಶ್ ಆಸ್ಪತ್ರೆಗಳ ಆರ್‌ಆರ್ ನಗರ ಹಾಗೂ ಯಲಹಂಕ ಘಟಕಗಳಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ 2026 ಅನ್ನು ಆಚರಿಸಲಾಯಿತು. ಆರೋಗ್ಯಕರ ಜೀವನಶೈಲಿ, ದೈಹಿಕ ಕ್ಷೇಮ ಹಾಗೂ ಮಾನಸಿಕ ಸಮತೋಲನದ ಮಹತ್ವವನ್ನು ಜನರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಆರ್‌ಆರ್ ನಗರ ಘಟಕದಲ್ಲಿ ಪತಂಜಲಿ ಯೋಗ ಸಂಸ್ಥೆಯ ಯೋಗ ಗುರು ಶ್ರೀ ರಾಮ್ ಗೋಪಾಲ್ ಶರ್ಮಾ ಅವರ ನೇತೃತ್ವದಲ್ಲಿ ವಿಶೇಷ ಯೋಗಾಭ್ಯಾಸ ನಡೆಯಿತು. ಆಸ್ಪತ್ರೆಯ ಸಿಬ್ಬಂದಿ, ವೈದ್ಯರು, ರೋಗಿಗಳು, ಅವರ ಕುಟುಂಬದವರು ಹಾಗೂ ಸಮುದಾಯದ ಸದಸ್ಯರು ಯೋಗಾಭ್ಯಾಸದಲ್ಲಿ ಪಾಲ್ಗೊಂಡು ಯೋಗದ ಮಹತ್ವವನ್ನು ಅನುಭವಿಸಿದರು. ಆಸ್ಪತ್ರೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ (COO) ಡಾ. ಸಂದೀಪ್ ಮಲ್ಲಬಾಡಿ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಇದೇ ವೇಳೆ ಯಲಹಂಕ ಘಟಕದಲ್ಲಿಯೂ ಯೋಗ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಐಎಂಎ ಯಲಹಂಕ ಅಧ್ಯಕ್ಷೆ ಡಾ. ನಲಿನಾ ಡಿ ಹಾಗೂ ಕ್ಲಸ್ಟರ್ ಸಿಒಒ ಅಭಿಷೇಕ್ ಥಾಮಸ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು. ಯೋಗ ತರಗತಿಯನ್ನು ಶ್ರೀಮತಿ ರೇಖಾ ರಾಜಶೇಖರ್ ಮತ್ತು ಶ್ರೀಮತಿ ಸ್ವಾತಿ ಕೆ.ಎಸ್. ನಡೆಸಿಕೊಟ್ಟರು.
ಎರಡೂ ಘಟಕಗಳಲ್ಲಿ ನಡೆದ ಕಾರ್ಯಕ್ರಮಗಳಲ್ಲಿ ಒಟ್ಟು ಸುಮಾರು 500 ಮಂದಿ ಭಾಗವಹಿಸಿದ್ದು, ಯೋಗದ ಮೂಲಕ ಆರೋಗ್ಯ ಕಾಪಾಡಿಕೊಳ್ಳುವ ಸಂದೇಶವನ್ನು ಸಮಾಜಕ್ಕೆ ತಲುಪಿಸಲಾಯಿತು.
ಪತಂಜಲಿ ಯೋಗ ಸಂಸ್ಥೆಯ ಸಹಯೋಗದಲ್ಲಿ ಆಯೋಜಿಸಲಾದ ಈ ಕಾರ್ಯಕ್ರಮವು ಸಮುದಾಯದಲ್ಲಿ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವುದರ ಜೊತೆಗೆ, ಆರೋಗ್ಯಕರ ಜೀವನಶೈಲಿಯನ್ನು ಉತ್ತೇಜಿಸುವ ಸ್ಪರ್ಶ್ ಆಸ್ಪತ್ರೆಗಳ ಬದ್ಧತೆಯನ್ನು ಮತ್ತಷ್ಟು ಬಲಪಡಿಸಿತು.



















