ಬೆಂಗಳೂರು : ವಿಶ್ವೇಶ್ವರಯ್ಯ ಕೈಗಾರಿಕೆ ಮತ್ತು ತಾಂತ್ರಿಕ ಮ್ಯೂಸಿಯಂನಲ್ಲಿ ಖಾಲಿ ಇರುವ 07 ಹುದ್ದೆಗಳ ನೇಮಕಾತಿಗಾಗಿ (VITM Recruitment 2026) ಅಧಿಸೂಚನೆ ಹೊರಡಿಸಲಾಗಿದೆ. ಆರ್ಟಿಸ್ಟ್ ಹಾಗೂ ಸೈನ್ಸ್ ಕಮ್ಯುನಿಕೇಟರ್ ಹುದ್ದೆಗಳ ನೇಮಕಾತಿ ನಡೆಯುತ್ತಿದೆ. ಅಭ್ಯರ್ಥಿಗಳನ್ನು ನೇರ ಸಂದರ್ಶನದ ಮೂಲಕ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ನೇಮಕಾತಿಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿ ಇಲ್ಲಿದೆ.
ಹುದ್ದೆಗಳ ಸಂಕ್ಷಿಪ್ತ ವಿವರ
ನೇಮಕಾತಿ ಸಂಸ್ಥೆ: ವಿಶ್ವೇಶ್ವರಯ್ಯ ಕೈಗಾರಿಕೆ ಮತ್ತು ತಾಂತ್ರಿಕ ಮ್ಯೂಸಿಯಂ (VITM)
ಒಟ್ಟು ಹುದ್ದೆಗಳು: 07
ನೇಮಕಾತಿ ವಿಧಾನ: ನೇರ ಸಂದರ್ಶನ
ಸಂದರ್ಶನದ ದಿನಾಂಕ: ಜೂನ್ 8
ಉದ್ಯೋಗ ಸ್ಥಳ: ಬೆಂಗಳೂರು
1 ಆರ್ಟಿಸ್ಟ್ ಹಾಗೂ 6 ಸೈನ್ಸ್ ಕಮ್ಯುನಿಕೇಟರ್ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತಿದೆ. ಸಂದರ್ಶನಕ್ಕೆ ಹಾಜರಾಗಲು ಬಯಸುವವರು ಮಾನ್ಯತೆ ಪಡೆದ ಯಾವುದೇ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿರಬೇಕು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ನೇಮಕಾತಿ ಹೊಂದಿದವರಿಗೆ ಮಾಸಿಕ 35 ಸಾವಿರ ರೂಪಾಯಿಯಿಂದ 40 ಸಾವಿರ ರೂಪಾಯಿವರೆಗೆ ಸಂಬಳ ನೀಡಲಾಗುತ್ತದೆ.
ಆಪ್ಟಿಟ್ಯೂಡ್ ಹಾಗೂ ಕಮ್ಯುನಿಕೇಷನ್ ಸ್ಕಿಲ್ ಟೆಸ್ಟ್ ಹಾಗೂ ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಸಂದರ್ಶನಕ್ಕೆ ಹಾಜರಾಗುವವರು ಮೊದಲಿಗೆ http://vismuseum.gov.in/ ವೆಬ್ ಸೈಟ್ ಗೆ ಭೇಟಿ ನೀಡಬೇಕು. ನೇಮಕಾತಿಗೆ ಸಂಬಂಧಿಸಿದ ಅಧಿಸೂಚನೆ ಓದಿಕೊಳ್ಳಬೇಕು. ಅಗತ್ಯ ದಾಖಲೆಗಳೊಂದಿಗೆ ಈ ಕೆಳಗಿನ ವಿಳಾಸದಲ್ಲಿ ನಡೆಯುವ ಸಂದರ್ಶನದಲ್ಲಿ ಪಾಲ್ಗೊಳ್ಳಬೇಕು.
ಗಮನಿಸಿ: ಸೈನ್ಸ್ ಕಮ್ಯುನಿಕೇಟರ್ ಹುದ್ದೆಗಳಿಗೆ ಜೂನ್ 2ರಂದು ಸಂದರ್ಶನ ನಡೆಯಲಿದೆ. ಆರ್ಟಿಸ್ಟ್ ಹುದ್ದೆಗಳಿಗೆ ಜೂನ್ 8ರಂದು ನೇರ ಸಂದರ್ಶನ ನಡೆಯಲಿದೆ.
ಸಂದರ್ಶನ ನಡೆಯುವ ಸ್ಥಳ
Visvesvaraya Industrial & Technological Museum, Bengaluru
ಇದನ್ನೂ ಓದಿ : ಗ್ರಾಹಕರ ನೆಚ್ಚಿನ ಬೈಕ್ ಸ್ಪ್ಲೆಂಡರ್‌ಗೆ ಹೊಸ ಲುಕ್ : ಹೈಟೆಕ್ ಫೀಚರ್‌ಗಳೊಂದಿಗೆ ಮಾರುಕಟ್ಟೆಗೆ ಲಗ್ಗೆ!



















