ಮೈಸೂರು : ಮೈಸೂರಿನ ತಹಶೀಲ್ದಾರ್ ಕಚೇರಿಯಲ್ಲಿ ವಕೀಲರು ಮತ್ತು ತಹಶೀಲ್ದಾರ್ ನಡುವೆ ಮಾತಿನ ಚಕಮಕಿ ನಡೆದ ಘಟನೆ ಬೆಳಕಿಗೆ ಬಂದಿದೆ. ವಕೀಲ ರಂಜಿತ್ ಹಾಗೂ ತಹಶೀಲ್ದಾರ್ ಮಹೇಶ್ ನಡುವೆ ವಾಗ್ವಾದ ಉಂಟಾಗಿ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ.

ಸಾರ್ವಜನಿಕರಿಗೆ ಕಚೇರಿ ಪ್ರವೇಶ ನಿರಾಕರಿಸಿರುವುದಕ್ಕೆ ಆಕ್ರೋಶಗೊಂಡ ವಕೀಲರು, ಮುಂಭಾಗದ ಬಾಗಿಲು ಮುಚ್ಚಿ ತಹಶೀಲ್ದಾರ್ ಹಿಂಬಾಗಿಲ ಮೂಲಕ ಓಡಾಟ ನಡೆಸುತ್ತಿರುವುದನ್ನು ಪ್ರಶ್ನಿಸಿದ್ದಾರೆ. ಒಳಗೆ ಪ್ರವೇಶ ನೀಡುವಂತೆ ಆಗ್ರಹಿಸಿದರೂ ತಹಶೀಲ್ದಾರ್ ನಿರಾಕರಿಸಿದ್ದರಿಂದ ವಕೀಲರು ಕಚೇರಿಯ ಒಳ ನುಗ್ಗಿದ್ದಾರೆ ಎಂದು ತಿಳಿದುಬಂದಿದೆ.
“ಜನರಿಗೆ ಸೇವೆ ಮಾಡಬೇಕಾದವರು ಬಾಗಿಲು ಹಾಕಿಕೊಂಡು ಏನು ಮಾಡ್ತಿದ್ದೀರಿ?” ಎಂದು ವಕೀಲರು ತಹಶೀಲ್ದಾರ್‌ಗೆ ತರಾಟೆಗೆ ತೆಗೆದುಕೊಂಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ತಹಶೀಲ್ದಾರ್, “ಕರ್ತವ್ಯಕ್ಕೆ ಅಡ್ಡಿಪಡಿಸುತ್ತಿದ್ದೀರಿ” ಎಂದು ಮರು ಉತ್ತರ ನೀಡಿದ್ದಾರೆ.
ಈ ಪರಸ್ಪರ ಮಾತಿನ ಚಕಮಕಿ ಮೈಸೂರು ತಹಶೀಲ್ದಾರ್ ಕಚೇರಿಯಲ್ಲಿ ಗೊಂದಲದ ವಾತಾವರಣ ಸೃಷ್ಟಿಸಿದ್ದು, ಘಟನೆ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
ಇದನ್ನೂ ಓದಿ : ಚಿಕ್ಕಮಗಳೂರಲ್ಲಿ ಭೀಕರ ಸಿಲಿಂಡರ್ ಸ್ಫೋಟ – ಸಿಸಿಟಿವಿಯಲ್ಲಿ ದೃಶ್ಯ ಸೆರೆ!



















