ಬೆಂಗಳೂರು: ಪಾರ್ಕಿಂಗ್‌ನಲ್ಲಿ ಕಾರು ರಿವರ್ಸ್ ತೆಗೆಯುವಾಗ ನಡೆದ ಅಪಘಾತದಲ್ಲಿ ವ್ಯಕ್ತಿಯೋರ್ವ ಸಾವನ್ನಪ್ಪಿರುವ ಘಟನೆ ನಗರದ ಸ್ಯಾಟ್ ಲೈಟ್ ಪಾರ್ಕಿಂಗ್‌ನಲ್ಲಿ ನಡೆದಿದೆ.
ಸಿದ್ಧಾರ್ಥ್ ನಗರ ಸುಂಕದ ಕಟ್ಟೆ ನಿವಾಸಿಯಾಗಿರುವ ಶಾಮದೊರೆ (45) ಮೃತ ವ್ಯಕ್ತಿ. ಬೆಳಗ್ಗೆ ಜಾವ 5 ಗಂಟೆ ಸುಮಾರಿಗೆ ಪಾರ್ಕಿಂಗ್‌ನಲ್ಲಿ ಕಾರನ್ನು ರಿವರ್ಸ್ ತೆಗೆಯುವಾಗ ಕಾರಿನ ಹಿಂಬದಿಗೆ ಸಿಕ್ಕಿ ಈ ದುರ್ಘಟನೆ ಸಂಭವಿಸಿದೆ.
ಸದ್ಯ ಮೃತದೇಹವನ್ನ ಮರಣೋತ್ತರ ಪರೀಕ್ಷೆಗೆಂದು ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಈ ಘಟನೆ ಸಂಬಂಧ ಬ್ಯಾಟರಾಯನಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಗ್ಯಾರೇಜ್‌ನಲ್ಲಿ ಬೆಂಕಿ ಅವಘಡ – 7 ಬೈಕ್‌ಗಳು ದಹನ



















