ಬೆಂಗಳೂರು : ಜಾತ್ರೆಯಲ್ಲಿ ಪಲ್ಲಕ್ಕಿ ಹೊತ್ತ ಟ್ರ್ಯಾಕ್ಟರ್ ಹರಿದು ಯುವಕನೊಬ್ಬ ಸಾವನ್ನಪ್ಪಿರುವ ದಾರುಣ ಘಟನೆ ಬೆಂಗಳೂರಿನ ಹುಳಿಮಾವು ಕೋದಂಡ ರಾಮಸ್ವಾಮಿ ದೇವಸ್ಥಾನದ ಬ್ರಹ್ಮರಥೋತ್ಸವದಲ್ಲಿ ನಡೆದಿದೆ.
ಬನಶಂಕರಿ ನಿವಾಸಿ ಅಕ್ಷತ್ (27) ಸ್ಥಳದಲ್ಲೇ ಸಾವನ್ನಪ್ಪಿರುವ ದುರ್ದೈವಿ. ಪಲ್ಲಕ್ಕಿ ನೋಡುತ್ತಾ ನಿಂತಿದೆ ಯುವಕನಿಗೆ ಟ್ರ್ಯಾಕ್ಟರ್ ಗುದ್ದಿದ ಪರಿಣಾಮ ಈ ಅವಘಡ ಸಂಭವಿಸಿದೆ. ಸ್ನೇಹಿತರಿಗೆ ಮದುವೆ ಆಹ್ವಾನ ಪತ್ರಿಕೆ ನೀಡಲು ಬಂದಿದ್ದ ಅಕ್ಷತ್‌ಗೆ. ಜಾತ್ರೆ ನೋಡಿಕೊಂಡು ಹೋಗೋಣ ಎಂದು ಅಲ್ಲಿಯೇ ಉಳಿದುಕೊಂಡಿದ್ದ. ಆದರೆ ಮದುವೆಗೂ ಮುನ್ನವೇ ಟ್ರ್ಯಾಕ್ಟರ್ ಹರಿದು ಅಕ್ಷತ್ ಸಾವನಪ್ಪಿದ್ದಾನೆ.
ದುರ್ಘಟನೆ ನಡೆದರೂ ಕೂಡ ದೇವಾಲಯ ಟ್ರಸ್ಟಿಗಳು ಸ್ಥಳಕ್ಕೆ ಬಂದಿಲ್ಲ. ಟ್ರಾಕ್ಟರ್ ಚಾಲಕನ ಅಜಾಗರೂಪತೆಯಿಂದ ಈ ಒಂದು ಘಟನೆ ನಡೆದಿದೆ. ಘಟನೆ ಬಳಿಕ ಟ್ರಾಕ್ಟರ್ ಚಾಲಕ ಸ್ಥಳದಿಂದ ಪರಾರಿ ಆಗಿದ್ದಾನೆ. ಸ್ಥಳಕ್ಕೆ ಬೆಂಗಳೂರು ದಕ್ಷಿಣ ಸಂಚಾರಿ ಡಿಸಿಪಿ ಗೋಪಾಲ್ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ಹುಳಿಮಾವು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ಹಾದಿ ತಪ್ಪಿದ ಕದನ ವಿರಾಮ : ಇಸ್ರೇಲ್-ಇರಾನ್ ನಡುವೆ ಕ್ಷಿಪಣಿ ಸಮರ.. ಸಂಕಷ್ಟದಲ್ಲಿ ಟ್ರಂಪ್!


















