ಬೆಂಗಳೂರು : ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ ಭಾರತದಲ್ಲಿ ಅಡುಗೆ ಅನಿಲ ಸಿಲಿಂಡರ್ ಪೂರೈಕೆಯಲ್ಲಿ ಸ್ವಲ್ಪ ವ್ಯತ್ಯಯವಾಗಿದೆ. 14.2 ಕೆ.ಜಿ ತೂಕದ ಅಡುಗೆ ಅನಿಲ ಸಿಲಿಂಡರ್ ಬುಕ್ ಮಾಡಿದವರಿಗೆ ಸಿಲಿಂಡರ್ ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿದೆ. ಇದನ್ನು ಮನಗಂಡ ಕೇಂದ್ರ ಸರ್ಕಾರವು 5 ಕೆಜಿ ಎಲ್‌ಪಿಜಿ ಸಿಲಿಂಡರ್ ಪೂರೈಕೆಯ ನಿಯಮಗಳನ್ನು ಸಡಿಲಗೊಳಿಸಿದೆ. ಈಗ ಯಾವುದೇ ಅಡ್ರೆಸ್ ಪ್ರೂಫ್ ಇಲ್ಲದೆ ಸಾರ್ವಜನಿಕರು 5 ಕೆ.ಜಿ ಸಿಲಿಂಡರ್‌ಗಳನ್ನು ಖರೀದಿಸಬಹುದಾಗಿದೆ.
ನಿಮ್ಮ ಹತ್ತಿರದ ಎಚ್.ಪಿ, ಇಂಡೇನ್, ಭಾರತ್ ಗ್ಯಾಸ್ ಸೇರಿ ಯಾವುದೇ ಗ್ಯಾಸ್ ವಿತರಕರು ಅಥವಾ ಡೀಲರ್‌ಗಳ ಬಳಿ ತೆರಳಿ, ಯಾವುದೇ ಅಡ್ರೆಸ್ ಪ್ರೂಫ್ ನೀಡದೆ 5 ಕೆ.ಜಿ ಸಿಲಿಂಡರ್ ಪಡೆಯಬಹುದಾಗಿದೆ. ಅಲ್ಲದೆ, ಕೆಲ ಆಯ್ದ ಪೆಟ್ರೋಲ್ ಬಂಕ್ ಗಳಲ್ಲೂ ಸಿಲಿಂಡರ್ ಗಳನ್ನು ಖರೀದಿಸಬಹುದಾಗಿದೆ. ದೇಶ ಸಾರ್ವಜನಿಕರಿಗೆ ಅಡುಗೆ ಅನಿಲ ಸಿಲಿಂಡರ್ ಕೊರತೆಯಾಗಬಾರದು ಎಂದು ಕೇಂದ್ರ ಸರ್ಕಾರ ನಿಯಮಗಳನ್ನು ಸಡಿಲಗೊಳಿಸಿದೆ. ಹಾಗೆಯೇ, 5 ಕೆ.ಜಿ ಸಿಲಿಂಡರ್ ಗಳ ಪೂರೈಕೆಯನ್ನು ದ್ವಿಗುಣಗೊಳಿಸಿದೆ.
5 ಕೆ.ಜಿ ತೂಕದ ಚೋಟು ಸಿಲಿಂಡರ್ ಪಡೆಯಲು ಯಾವುದೇ ಅಡ್ರೆಸ್ ಪ್ರೂಫ್ ಅಥವಾ ರೇಷನ್ ಕಾರ್ಡ್ ಅಗತ್ಯವಿಲ್ಲ. ಕೇವಲ ನಿಮ್ಮ ಯಾವುದಾದರೂ ಒಂದು ಗುರುತಿನ ಚೀಟಿ (Aadhaar ಅಥವಾ ಇತರ ಐಡಿ) ತೋರಿಸಿದರೆ ಸಾಕು ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಭಾರತ್ ಪೆಟ್ರೋಲಿಯಂ ಅಥವಾ ಎಚ್.ಪಿ ಬಂ ಕ್ಗಳಲ್ಲಿ ಇವು ಸುಲಭವಾಗಿ ಸಿಗುತ್ತವೆ.
ತಿಳಿಯಬೇಕಾದ ಒಂದಷ್ಟು ಅಂಶಗಳು :
- ಮೊದಲ ಬಾರಿ ಖರೀದಿ : ನೀವು ಮೊದಲ ಬಾರಿಗೆ ಸಿಲಿಂಡರ್ ತೆಗೆದುಕೊಳ್ಳುವಾಗ, ಸಿಲಿಂಡರ್ ನ ಬೆಲೆ (Security Deposit) ಮತ್ತು ಗ್ಯಾಸ್ ನ ಬೆಲೆಯನ್ನು ಸೇರಿಸಿ ಹಣ ಪಾವತಿಸಬೇಕಾಗುತ್ತದೆ.
- ರಿಫಿಲ್ : ಒಮ್ಮೆ ಸಿಲಿಂಡರ್ ಖಾಲಿಯಾದ ನಂತರ, ಅದನ್ನು ಬಂಕ್ ಅಥವಾ ಏಜೆನ್ಸಿಗೆ ಹಿಂತಿರುಗಿಸಿ, ಕೇವಲ ಗ್ಯಾಸ್ ನ ಹಣ ನೀಡಿ ಹೊಸದನ್ನು ಪಡೆಯಬಹುದು.
- ಸುರಕ್ಷತೆ : ಇವುಗಳನ್ನು ಪಡೆಯುವಾಗ ಅಧಿಕೃತ ಬಿಲ್ ಪಡೆಯುವುದನ್ನು ಮರೆಯಬೇಡಿ, ಇದು ಗ್ಯಾಸ್ ಸೋರಿಕೆಯಂತಹ ಸಂದರ್ಭಗಳಲ್ಲಿ ವಿಮೆಗೆ ಸಹಾಯವಾಗುತ್ತದೆ.
ಇದನ್ನೂ ಓದಿ : ಮಗಳನ್ನೂ ಕರ್ಕೊಂಡ್ ಹೋದ.. ಹಣನೂ ಕಿತ್ಕೊಂಡ್ ಹೋದ : ಅವಳಿ ನಗರದಲ್ಲಿ ನಡಿತಿದ್ಯಾ ಹಿಂದೂ ಯುವತಿಯರ ಟ್ರ್ಯಾಪ್?


















