ಮೈಸೂರು: ಮೈಸೂರು ವಿಶ್ವ ವಿದ್ಯಾನಿಲಯದ ಆಡಳಿತ ವೈಖರಿಯ ಬಗ್ಗೆ ವಿಡಿಯೋ ಮಾಡುವ ಮೂಲಕ ವಿದ್ಯಾರ್ಥಿಯೊಬ್ಬರು ತಮ್ಮ ಬೇಸರ ಹೊರ ಹಾಕಿದ್ದಾರೆ.
ವಿಡಿಯೋದಲ್ಲಿ ಯುವಕ ತಾನೊಬ್ಬ ಅಸಹಾಯಕ ವಿದ್ಯಾರ್ಥಿ ಎಂದು ಹೇಳಿಕೊಂಡು, ನಾನು 2024 ರಲ್ಲಿ ನಾನು ಬಿಕಾಂ ಮುಗಿಸಿದ್ದೇನೆ ಇದೀಗ ಎಂಕಾಂ ಕೊನೆಯ ಸೆಮಿಸ್ಟರ್ ಪರೀಕ್ಷೆ ಬರೆಯುತ್ತಿದ್ದೇನೆ ಆದರೆ ಇನ್ನೂ ಕೂಡ ಪದವಿ ಸರ್ಟಿಫಿಕೇಟ್ ಕೊಡೋಕೆ ಮೈಸೂರು ಯೂನಿವರ್ಸಿಟಿ ಆಗಿಲ್ಲ ಇದು ಅಲ್ಲಿಯ ಆಡಳಿತದ ವೈಖರಿ ಎಂದು ಕಿಡಿಕಾರಿದ್ದಾರೆ.
ಅಲ್ಲದೆ ಇದೇ ವಿಚಾರವಾಗಿ ಮುಕ್ತ ವಿವಿಯ ಸಿಬ್ಬಂಧಿ ಗೀತಾಂಜಲಿ ಎಂಬುವವರು ಯುವಕನ ವಿಡಿಯೋ ಶೇರ್ ಮಾಡಿ ನನ್ನ ಮಗಳು ಪಿಜಿ ಮುಗಿಸಿದ್ದಾಳೆ ಅವಳಿಗೆ ಇನ್ನೂ ಅಂಕಪಟ್ಟಿ ಸಿಕ್ಕಿಲ್ಲ ಕೇಳಿದ್ರೆ 10 ಸಾವಿರ ಕೊಡಿ ಅಂತ ಕೇಳ್ತಾರೆ, ಕರ್ನಾಟಕದ ಎಲ್ಲಾ ಯೂನಿಯರ್ಸಿಟಿ ಗಾಳಿ ಗುಜರಿ ಅಂಗಡಿಗಳಾಗಿವೆ ಉನ್ನತ ಶಿಕ್ಷಣ ಸಚಿವರು ಮೋರಿ ಕ್ಲಿನ್ ಮಾಡೋಕು ಅರ್ಹತೆ ಇಲ್ಲ ಅಂತ ನಾಲಿಗೆ ಹರಿಬಿಟ್ಟಿದ್ದು ಈ ಕುರಿತ ವಾಟ್ಸ್ ಅಪ್ ಚಾಟ್ ವೈರಲ್ ಆಗಿದೆ.
ಇದನ್ನೂ ಓದಿ : ಬೆಂಗಳೂರು ನಗರ ವಿವಿಯಲ್ಲಿ ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್‌ಗೆ ಅವಮಾನ – ಕ್ರಮಕ್ಕೆ ಆಗ್ರಹ



















