ಮೈಸೂರು : ರೈತನ ಮೇಲೆ ತಹಶೀಲ್ದಾರ್ ಧಮ್ಕಿ ಹಾಕಿರುವ ಆರೋಪ ಕೇಳಿಬಂದಿದ್ದು, ಈ ಸಂಬಂಧ ನಂಜನಗೂಡು ತಹಶಿಲ್ದಾರ್ ಡಾ.ಸ್ಮಿತಾರಾಮು ವಿರುದ್ದ ದೂರು ದಾಖಲಿಸಲಾಗಿದೆ.
ನಂಜನಗೂಡು ತಾಲ್ಲೂಕಿನ ನೇರಳೆ ಗ್ರಾಮದ ದೊಡ್ಡಮಾದೇಗೌಡ ಎಂಬುವವರಿಗೆ ತಹಶಿಲ್ದಾರ್ ಡಾ.ಸ್ಮಿತಾರಾಮು ಧಮ್ಕಿ ಹಾಕಿದ್ದಾರೆ ಎನ್ನಲಾಗಿದೆ. ತಂದೆಗೆ ಬಗರ್ ಹುಕುಂ ಸಾಗುವಳಿಯಲ್ಲಿ ಮಂಜೂರಾದ ಜಮೀನು ದುರಸ್ಥಿ ವಿಳಂಬ ಹಿನ್ನಲೆ ತಹಶಿಲ್ದಾರ್ ಬಳಿ ಅರ್ಜಿ ನೀಡಿ ಮನವಿ ಮಾಡಲು ಹೋದಗ ಎಫ್ಐಆರ್ ಹಾಕಿಸುವುದಾಗಿ ಧಮ್ಕಿ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಕುರಿತು ಪ್ರಾದೇಶಿಕ ಆಯುಕ್ತರಿಗೆ ರೈತ ದೊಡ್ಡಮಾದೆಗೌಡ ದೂರು ನೀಡಿದ್ದು,ಈ ಹಿನ್ನೆಲೆ ತನಿಖೆ ನೆಡೆಸಿ ವರದಿ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಪ್ರಾದೇಶಿಕ ಆಯುಕ್ತರು ಸೂಚನೆ ನೀಡಿದ್ದಾರೆ.
ನಂಜನಗೂಡು ತಹಶಿಲ್ದಾರ್ ಬ್ರಿಟಿಷ್ ಆಡಳಿತದ ರೀತಿ ವರ್ತಿಸುತ್ತಾರೆ. ಸಮಸ್ಯೆ ಹೇಳಲು ಹೊದಾಗ ಸೌಜನ್ಯಕ್ಕೂ ಚೇರ್ ಮೇಲೆ ಕೂರಿಸಿ ಗೌರವ ನೀಡಲ್ಲ. ಇದೇ ಮಾದರಿ ವರ್ತನೆ ಮುಂದುವರೆದರೆ ಹೋರಾಟಡ ಹಾದಿ ಹಿಡಿಯ ಬೇಕಾಗುತ್ತದೆ ಎಂದು ನಂಜನಗೂಡು ತಹಶಿಲ್ದಾರ್‌ಗ ರೈತ ಮುಖಂಡ ವಿದ್ಯಾಸಾಗರ್ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ : ಗಂಡು ಮಗುವಿನ ವ್ಯಾಮೋಹ : ಗರ್ಭಿಣಿ ಪತ್ನಿ, ಇಬ್ಬರು ಹೆಣ್ಣು ಮಕ್ಕಳನ್ನು ಈಜುಕೊಳಕ್ಕೆ ತಳ್ಳಿ ಕೊಂದ ಪಾಪಿ ಪತಿ



















