ರಾಯಚೂರು: ಕೌಟುಂಬಿಕ ಕಲಹ ಹಿನ್ನಲೆ ಗೃಹಿಣಿಯೊಬ್ಬಳು ನೇಣಿಗೆ ಶರಣಾಗಿರುವ ಘಟನೆ ರಾಯಚೂರು ಜಿಲ್ಲೆಯ ಸಿರವಾರ ತಾಲ್ಲೂಕಿನ ಜಿನ್ನಾಪುರ ಗ್ರಾಮದಲ್ಲಿ ನಡೆದಿದೆ.
ಪಾಪಮ್ಮ (24) ಗಂಡನ ಮನೆಯಲ್ಲಿ ನೇಣು ಬಿಗಿದುಕೊಂಡು ಸಾವನ್ನಪ್ಪಿದ ಗೃಹಿಣಿ. 6 ವರ್ಷದ ಹಿಂದೆ ಪಾಪಮ್ಮಳ ಮದುವೆಯಾಗಿದ್ದು,ಪಾಪಮ್ಮಳಿಗೆ ಒಂದು ಹೆಣ್ಣು ಒಂದು ಗಂಡು, ಮಕ್ಕಳಿದ್ದಾರೆ. ನಿನ್ನೆ ರಾತ್ರಿ ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ.
ಈ ವಿಚಾರವಾಗಿ ಮೃತಳ ಅಣ್ಣಾ ಮಹದೇವಪ್ಪ ಕವಿತಾಳ ಪೊಲೀಸ್ ಠಾಣೆಯಲ್ಲಿ ಸಾವಿಗೆ ಪ್ರಚೋದನೆ ನೀಡಿದ ಹಿನ್ನಲೆ ಮೂವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಸದ್ಯ ಕವಿತಾಳ ಪೊಲೀಸರು ಪಾಪಮ್ಮಳ ಗಂಡನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಮಗಳನ್ನು ಕೆದುಕೊಂಡ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ.
ಇದನ್ನೂ ಓದಿ : ಗೂಡ್ಸ್ ವಾಹನ ಡಿಕ್ಕಿ : 7 ವರ್ಷದ ಬಾಲಕ ಸಾವು


















