ಚಿಕ್ಕಬಳ್ಳಾಪುರ: ಕೋಟಿ ಕೋಟಿ ವರದಕ್ಷಿಣೆ ಕೊಟ್ಟು ಮದುವೆಯಾದರು ಗಂಡನ ಮನೆಯವರ ವರದಕ್ಷಿಣೆ ದಾಹಕ್ಕೆ ಬೇಸತ್ತ ಮಹಿಳೆಯೊಬ್ಬಳು ತವರು ಮನೆ ಸೇರಿರುವ ಘಟನೆ ಚಿಕ್ಕಬಳ್ಳಾಪುರದ ಶಿಡ್ಲಘಟ್ಟದಲ್ಲಿ ನಡೆದಿದೆ.
ಶಿಡ್ಲಘಟ್ಟ ಸಂತೋಷ್ ನಗರ ನಿವಾಸಿ ಮಿಸ್ಬಾ ಕೌಸರ್ (21) ಕಿರುಕುಳಗೊಳಗಾದ ಮಹಿಳೆ. ಶಿಡ್ಲಘಟ್ಟದ ಅಜಾದ್ ನಗರ ಶಾಹೀದ್ ಪಾಷಾ (25) ಪತ್ನಿಗೆ ಕಿರುಕುಳ ನೀಡಿದ ಪತಿ.
ಮದುವೆಯಾಗಿ 2 ವರ್ಷ ಆದ್ರು ವರದಕ್ಷಿಣೆಗಾಗಿ ಗಂಡ ಹಾಗೂ ಅತ್ತೆ ಮಾವಾ ಸೇರಿದಂತೆ 7 ಜನರು ನಿರಂತರವಾಗಿ ಮಹಿಳೆಗೆ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಲಾಗಿದೆ.

ಗರ್ಭಿಣಿ ಮಹಿಳೆಯೆಂದು ನೋಡದೆ ಪಾಪಿ ಗಂಡ ಹಲ್ಲೆ ಮಾಡಿದ್ದಾನೆ. ಮದುವೆ ವೇಳೆ ಯುವತಿಯ ಪೋಷಕರು 80 ಲಕ್ಷ ಬಂಗಾರ, ಕೀಯಾ ಕಾರು ,ರಾಡೋ ವಾಚ್ ವರದಕ್ಷಿಣೆ ಕೊಟ್ಟು ಮದುವೆ ಮಾಡಿಸಿದ್ದರು. ಈಗ ಮತ್ತೆ ಮನೆ ಹಾಗೂ 50 ಲಕ್ಷ ಹಣ ಕೊಡುವಂತೆ ಹೆಂಡತಿಗೆ ಕಿರುಕುಳ ನೀಡುತ್ತಿದ್ದಾನೆ.
ನಿರಂತರ ಕಿರುಕುಳಕ್ಕೆ ಬೇಸತ್ತ ಮಹಿಳೆ 7 ತಿಂಗಳ ಮಗುವಿನೊಂದಿಗೆ ತವರು ಮನೆ ಸೇರಿದ್ದಾಳೆ. ಈ ಘಟನಾ ಸಂಬಂಧ ಶಿಡ್ಲಘಟ್ಟ ನಗರಠಾಣೆಯಲ್ಲಿ ವರದಕ್ಷಿಣೆ ಕಿರುಕುಳ ಆರೋಪ ಹಿನ್ನಲೇ ದೂರು ದಾಖಲಾಗಿದೆ.
\ಇದನ್ನೂ ಓದಿ: ಬೆಳ್ಳಂಬೆಳಗ್ಗೆ ಕರಾವಳಿಯಲ್ಲಿ ಹರಿದ ನೆತ್ತರು.. ಮಾರಕಾಸ್ತ್ರಗಳಿಂದ ಕೊಚ್ಚಿ ರೌಡಿಶೀಟರ್ ಬರ್ಬರ ಹತ್ಯೆ!



















