ಬೆಂಗಳೂರು : ‘ಬಾರಿಶ್ ಹಣ’ ಹೆಸರಿನಲ್ಲಿ ಡಬ್ಲಿಂಗ್ ಮಾಡುವುದಾಗಿ ನಂಬಿಸಿ, ಜನರಿಗೆ ಪಂಗನಾಮ ಹಾಕಿ ಲಕ್ಷಾಂತರ ರೂಪಾಯಿ ವಂಚನೆ ನಡೆಸಿದ ಗ್ಯಾಂಗ್ ಅನ್ನು ಪೊಲೀಸರು ಬಂಧಿಸಿರುವ ಘಟನೆ ಬೆಳಕಿಗೆ ಬಂದಿದೆ. .

ಕಾಂಟ್ರಾಕ್ಟರ್ ರಮೇಶ್ ಎಂಬುವವರನ್ನು ಟಾರ್ಗೆಟ್ ಮಾಡಿಕೊಂಡ ಆರೋಪಿಗಳು, 1 ಲಕ್ಷಕ್ಕೆ 3 ಲಕ್ಷ ಕೊಡುತ್ತೇವೆ ಎಂದು ನಂಬಿಸಿ ಒಟ್ಟು 28 ಲಕ್ಷ 60 ಸಾವಿರ ರೂಪಾಯಿ ಪಡೆದು ಪರಾರಿಯಾಗಿದ್ದರು. ನಾವು ಕೊಡುವ ಹಣ 9 ತಿಂಗಳ ನಂತರ ಪೇಪರ್ ಆಗುತ್ತದೆ ಎಂದು ನಂಬಿಸಿ ಮೋಸ ಮಾಡಿರುವುದು ದೂರುದಾರ ರಮೇಶ್ ಆರೋಪಿಸಿದ್ದಾರೆ.
ಈ ಪ್ರಕರಣದಲ್ಲಿ ಮಧುಗಿರಿ ಮೂಲದ ವಿಜಯ್, ಕೆರೆಗುಡ್ಡದಹಳ್ಳಿಯ ಕೃಷ್ಣ ಸಿಂಗ್ ಹಾಗೂ ಡ್ರೈವರ್ ನವೀನ್ ಪ್ರಮುಖ ಆರೋಪಿಗಳಾಗಿದ್ದಾರೆ. ಸಂತ್ರಸ್ಥ ರಮೇಶ್ 8ನೇ ಮೈಲಿ ಬಳಿ ಹಣವನ್ನು ತಂದಾಗ, ಅದನ್ನು ಪರಿಶೀಲಿಸಿ ಕೊಡುತ್ತೇವೆ ಎಂದು ಹೇಳಿ ಹಣ ಪಡೆದು ನಂತರ ಪರಾರಿಯಾಗಿದ್ದರು.
ಇದಲ್ಲದೆ, ಇದೇ ರೀತಿ ಮತ್ತೊಬ್ಬ ವ್ಯಕ್ತಿಯಿಂದಲೂ ಸುಮಾರು 18 ಲಕ್ಷ ರೂಪಾಯಿ ವಂಚಿಸಿರುವುದು ತನಿಖೆಯಲ್ಲಿ ಬಹಿರಂಗವಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕ್ರಮ ಕೈಗೊಂಡು, ಸದ್ಯಕ್ಕೆ ಒಟ್ಟು 40 ಲಕ್ಷ ರೂಪಾಯಿ ಹಣವನ್ನು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಬಾಗಲಗುಂಟೆ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ಬಂ ವಿರುದ್ಧ ಮುಂದಿನ ತನಿಖೆ ಮುಂದುವರಿದಿದೆ.
ಇದಲ್ಲದೆ, ಇದೇ ರೀತಿ ಮತ್ತೊಬ್ಬ ವ್ಯಕ್ತಿಯಿಂದಲೂ ಸುಮಾರು 18 ಲಕ್ಷ ರೂಪಾಯಿ ವಂಚಿಸಿರುವುದು ತನಿಖೆಯಲ್ಲಿ ಬಹಿರಂಗವಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕ್ರಮ ಕೈಗೊಂಡು, ಸದ್ಯಕ್ಕೆ ಒಟ್ಟು 40 ಲಕ್ಷ ರೂಪಾಯಿ ಹಣವನ್ನು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಬಾಗಲಗುಂಟೆ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದ್ದು, ಇದೀಗ ಆರೋಪಿಗಳನ್ನು ಬಂಧಿಸಿ ಮುಂದಿನ ತನಿಖೆ ಮುಂದುವರಿಸಿದ್ದಾರೆ.
ಇದನ್ನೂ ಓದಿ : ಅಲ್ಲು ಅರ್ಜುನ್ ಸಿನಿಮಾ ಪ್ರೇರಣೆ.. ರಕ್ತ ಚಂದನ ಮಾರಾಟ ಮಾಡಲು ಬಂದ ಕಿರಾತಕ ಅರೆಸ್ಟ್!


















