ಬೆಳಗಾವಿ: ರಸ್ತೆಯಲ್ಲಿ ಜನರನ್ನು ಅಡ್ಡಗಟ್ಟಿ ದರೋಡೆ ಮಾಡ್ತಿದ್ದ ಗ್ಯಾಂಗ್‌ವೊಂದು ಇದೀಗಾ ಪೊಲೀಸರ ಬಲೆಗೆ ಬಿದ್ದಿದೆ. ಬೆಳಗಾವಿ ಜಿಲ್ಲೆಯ ಗೋಕಾಕ್ ನಗರದಲ್ಲಿ ಮಾರ್ಚ್ 17ರಂದು ನಡೆದಿದ್ದ ಡಕಾಯಿತಿ ಪ್ರಕರಣವೊಂದನ್ನು ಗೋಕಾಕ್ ಪೊಲೀಸರು ಬೇಧಿಸಿದ್ದಾರೆ.
ದರೋಡೆ ಗ್ಯಾಂಗ್‌ವೊಂದು ದಾರಿಹೋಕನನ್ನು ತಡೆದು ಕೊರಳಲ್ಲಿದ್ದ16 ಗ್ರಾಮ ಚಿನ್ನದ ಚೈನ್, ಲಾಕೆಟ್ ದರೋಡೆ ಮಾಡಿತ್ತು. ಈ ಸಂಬಂಧ ರಾಮಚಂದ್ರ ಘೋರ್ಪಡೆ ಎಂಬುವವರ ನೀಡಿದ ದೂರಿನ ಮೇರೆಗೆ ತನಿಖೆ ಕೈಗೊಂಡ ಗೋಕಾಕ್ ಪೊಲೀಸರು ಅಪ್ರಾಪ್ತ ಬಾಲಕ ಸೇರಿ ಒಟ್ಟು ಏಳು ಮಂದಿಯನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.
ಆಕಾಶ ತಳವಾರ, ರಾಮಸಿದ್ದ ತೋಳಿ, ರಿತೀಶ ಫಕ್ಕೇರಿ, ನಾಗರಾಜ್ ತೋಳಿ, ಗೋಪಾಲ ತೋಳಿ, ಸಿದ್ದಪ್ಪ ಕುರಬನ್ನವರ ಬಂಧಿತರ ಆರೋಪಿಗಳು
ಸದ್ಯ ಬಂಧಿತರಿಂದ 12ಸಾವಿರ ರೂಪಾಯಿ ಜಪ್ತಿ ಮಾಡಲಾಗಿದೆ. ದರೋಡೆ ಮಾಡಿದ್ದ ಬಂಗಾರದ ಚೈನ್ ಮತ್ತು ಲಾಕೆಟ್ ಕೇವಲ 12ಸಾವಿರಕ್ಕೆ ಖದೀಮರು ಮಾರಿದ್ದರು. ಈ ಘಟನಾ ಸಂಬಂಧ ಗೋಕಾಕ್ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ಬೆಳಗಾವಿಯಲ್ಲಿ ಭಾರೀ ಅಗ್ನಿ ಅವಘಡ : ಕೋಟ್ಯಾಂತರ ಮೌಲ್ಯದ ವಸ್ತು ಹಾನಿ



















