ಬೆಳಗಾವಿ: ಸ್ವಿಮ್ಮಿಂಗ್ ಮಾಡುವಾಗಲೇ ಹೃದಯಾಘಾತದಿಂದ ಸೇನಾಧಿಕಾರಿ ಸಾವನ್ನಪ್ಪಿದ ಘಟನೆ ಬೆಳಗಾವಿಯ ನಾನಾವಾಡಿಯ ಕಮಾಂಡೋ ವಿಂಗ್ ಆವರಣದಲ್ಲಿ ನಡೆದಿದೆ.
ಹರಿಯಾಣ ಮೂಲದ ಅಮಿತ್‌ಸಿಂಗ್ ಹೃದಯಾಘಾತದಿಂದ ಸಾವನ್ನಪ್ಪಿದ ಲೆಫ್ಟಿನೆಂಟ್. ಬೆಳಗಾವಿಯ ಎಂಎಲ್ಐಆರ್‌ಸಿ ಕಮಾಂಡೋ ವಿಂಗ್‌ನಲ್ಲಿ ಟ್ರೇನಿಂಗ್‌ನಲ್ಲಿ ಅಧಿಕಾರಿಯಾಗಿದ್ದರು ಎನ್ನಲಾಗಿದೆ.
ವಿಂಗ್ ಆವರಣದಲ್ಲಿ ಸ್ವಿಮ್ಮಿಂಗ್ ಪೂಲ್‌ನಲ್ಲಿ ಸ್ವಿಮ್ಮಿಂಗ್ ಮಾಡುವಾಗಲೇ ತೀವ್ರ ಹೃದಯಾಘಾತವಾಗಿದೆ. ಅಧಿಕಾರಿಯನ್ನು ಮೇಲಕ್ಕೆ ತಂದು ಲೈಫ್ ಗಾರ್ಡ್ ಪ್ರದೀಪ್ ಕುಮಾರ್ ಪ್ರಥಮ ಚಿಕಿತ್ಸೆ ನೀಡಿದ್ದಾರೆ. ಬಳಿಕ ಅಂಬುಲೆನ್ಸ್ ಮೂಲಕ ಬೆಳಗಾವಿ ಬೀಮ್ಸ್ ಆಸ್ಪತ್ರೆಗೆ ರವಾನಿಸಲಾಯಿತಾದರೂ ಮಾರ್ಗಮಧ್ಯದಲ್ಲೇ ಲೆಫ್ಟಿನೆಂಟ್ ಅಮಿತ್ ಸಿಂಗ್ ಸಾವನ್ನಪ್ಪಿದ್ದಾರೆ. ಟಿಳಕವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಜಾತ್ರಾ ಮಹೋತ್ಸವ ಸಮಿತಿಯ ಅಧ್ಯಕ್ಷರಾದ ಟಿ.ವಿ. ಪಾಂಡುರಂಗ ಅವರು ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ಖುದ್ದು ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದರು. ಗ್ಯಾಸ್ ಅಭಾವದಂತಹ ತಾಂತ್ರಿಕ ಸವಾಲುಗಳಿದ್ದರೂ, ಅನ್ನ ಸಂತರ್ಪಣೆಯು ಸುಗಮವಾಗಿ ನಡೆಯುವಂತೆ ನೋಡಿಕೊಳ್ಳುವಲ್ಲಿ ಅವರು ಯಶಸ್ವಿಯಾದರು. ಎಷ್ಟೇ ಅಡಚಣೆಗಳಿದ್ದರೂ ಭಕ್ತರಿಗೆ ಪ್ರಸಾದ ವಿತರಣೆಯಲ್ಲಿ ವ್ಯತ್ಯಯವಾಗದಂತೆ ಸಮಿತಿ ಎಚ್ಚರಿಕೆ ವಹಿಸಿತ್ತು.
ಇದನ್ನೂ ಓದಿ : ಮಾರಕಾಸ್ತ್ರದಿಂದ ಹೊಡೆದು ಯುವಕನ ಬರ್ಬರ ಕೊಲೆ : ಹಳೆ ದ್ವೇಷ ಶಂಕೆ



















